ಶೂನ್ಯದಿಂದ ಸಾಮ್ರಾಜ್ಯ ಕಟ್ಟಿದ ಸಾಧಕ : ಸಿವಿಲ್ ಕ್ಷೇತ್ರದ ಧ್ರುವತಾರೆ ಎಸ್‌ಕೆಎಸ್ ಸುಜಯ ಕುಮಾರ್ ಶೆಟ್ಟಿ
ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಓರ್ವ ಸಾಮಾನ್ಯ ಇಂಜಿನಿಯರ್, ಇಂದು ಸಿವಿಲ್ ತಂತ್ರಜ್ಞಾನದ ಬೃಹತ್ ಸಾಮ್ರಾಜ್ಯವನ್ನೇ ಸೃಷ್ಟಿಸಿದ ರೋಚಕ ಕಥೆಯಿದು. ಪ್ರಾರಂಭದಲ್ಲಿ ಕಾರ್ಕಳದ ಪರಿಸರದಲ್ಲಿ ಸಣ್ಣಪುಟ್ಟ ಮನೆ ಹಾಗೂ ವಾಣಿಜ್ಯ ಸಂಕೀರ್ಣಗಳ ನಿರ್ಮಾಣದಲ್ಲಿ ಮಗ್ನರಾಗಿದ್ದ ಅವರು, ಇಂದು ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಕಾಮಗಾರಿಗಳ ಗುತ್ತಿಗೆಯನ್ನು ಯಶಸ್ವಿಯಾಗಿ ನಿರ್ವಹಿಸುವ ಹಂತಕ್ಕೆ ಬೆಳೆದಿದ್ದಾರೆ. ಕರ್ನಾಟಕದ ಮುಂಚೂಣಿ ಗುತ್ತಿಗೆದಾರರಲ್ಲಿ ಒಬ್ಬರಾಗಿ ಹೆಮ್ಮೆಯಿಂದ ಗುರುತಿಸಿಕೊಂಡಿರುವ ಇವರೇ ಎಸ್‌ಕೆಎಸ್ ಇನ್‌ಫ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಸುಜಯ ಕುಮಾರ್ ಶೆಟ್ಟಿ […]










