ನಮ್ಮೂರ ಸಾಧಕರು – ಗೂಗಲ್‌ನಲ್ಲಿ ಕಾರ್ಕಳದ ಸಂಕೇತ್‌

ಗೂಗಲ್‌ ಎನ್ನುವುದು ಮಾಹಿತಿ ತಂತ್ರಜ್ಞಾನದ ದೈತ್ಯ ಸಂಸ್ಥೆಗಳಲ್ಲೊಂದು. ಗೂಗಲ್‌ನಲ್ಲಿ ಉದ್ಯೋಗ ಪಡೆಯುವುದು ಅದೆಷ್ಟೋ ಯುವಕರ ಕನಸು. ಇದೇ ರೀತಿಯ ಕನಸ್ಸೊಂದನ್ನು ನನಸು ಮಾಡಿದವರು ಕಾರ್ಕಳದ ಸಂಕೇತ್‌.
ನಿವೃತ್ತ ಪ್ರಾಂಶುಪಾಲ ಗಣೇಶ್ ಬರ್ಲಾಯ ಹಾಗೂ ಉಪನ್ಯಾಸಕಿ ಸುಮನಾ ಎಂ.ಕೆ. ದಂಪತಿಯ ಪುತ್ರ ಸಂಕೇತ್‌ ಜಿ.ಬಿ., ಇವರ ಸಹೋದರ ಸಂಹಿತ್ ಜಿ. ಬಿ. ಅವರು ಮೆಟಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶಿಕ್ಷಣ
ಸಂಕೇತ್‌ ಜಿ. ಬಿ. ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನಿಟ್ಟೆ ಡಾ.ಎನ್‌.ಎನ್‌.ಎ.ಎಂ. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪಡೆದಿರುತ್ತಾರೆ. ಪದವಿ ಪೂರ್ವ ಶಿಕ್ಷಣವನ್ನು ಕಾರ್ಕಳ ಜ್ಞಾನಸುಧಾ ವಿದ್ಯಾಸಂಸ್ಥೆಯಲ್ಲಿ ಪಡೆದಿರುವ ಇವರು 2018ರ KCET ಪರೀಕ್ಷೆಯಲ್ಲಿ 18ನೇ ರ‍್ಯಾಂಕ್ ಗಳಿಸಿದ್ದರು. ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ನಡೆಸುವ ಜೆಇಇ ಮೈನ್‌ನಲ್ಲಿ 3791 (AIR) ಮತ್ತು ಜೆಇಇ ಅಡ್ವಾನ್ಸ್‌ಡ್‌ನಲ್ಲಿ 4094 (AIR) ಸ್ಥಾನ ಗಳಿಸಿರುತ್ತಾರೆ.

1 ಲಕ್ಷ ರೂ. ಬಹುಮಾನ
ದ್ವಿತೀಯ ಪಿಯು ಪರೀಕ್ಷೆಯಲ್ಲಿ PCMC ವಿಷಯಗಳಲ್ಲಿ ಪರಿಪೂರ್ಣ (100) ಅಂಕ ಪಡೆದಿರುತ್ತಾರೆ. ಅಂದು ಜ್ಞಾನಸುಧಾ ಸಂಸ್ಥೆಯಿಂದ ಮೊದಲ IITian ಆಗಿದ್ದಕ್ಕಾಗಿ 1 ಲಕ್ಷ ರೂ. ನಗದು ಬಹುಮಾನದೊಂದಿಗೆ ಪ್ರಶಸ್ತಿಗೆ ಭಾಜನರಾಗಿದ್ದರು.

2022ರಲ್ಲಿ ವಾರಾಣಾಸಿಯಲ್ಲಿ B.Tech in Mechanical Engineering, IIT (BHU) ಪೂರೈಸಿ ಕ್ಯಾಂಪಸ್ ಪ್ಲೇಸ್ಮೆಂಟ್ ನಲ್ಲಿ JP Morgans Chase ಕಂಪೆನಿಗೆ ಆಯ್ಕೆಗೊಂಡರು. ಗೂಗಲ್ ಸಂಸ್ಥೆ ನಡೆಸಿದ ವಿಶ್ವ ಮಟ್ಟದ kickstart coding ಸ್ಪರ್ಧೆಯಲ್ಲಿ 541ನೇ ಸ್ಥಾನ ಪಡೆದ ಇವರು ಬಳಿಕ ಗೂಗಲ್‌ಗೆ ಆಯ್ಕೆಯಾದರು.

ಸಂಗೀತದಲ್ಲಿ ವಿಶೇಷ ಒಲವಿರುವ ಇವರು ಗಿಟಾರ್, ಕೀಬೋರ್ಡ್, ಡ್ರಮ್ಸ್, ತಬಲಾ ಪ್ರಕಾರಗಳಲ್ಲಿ ಪ್ರವೀಣರು. ಅಲ್ಲದೇ ಚೆಸ್, ಬ್ಯಾಡ್ಮಿಂಟನ್‌ ಮೇಲೆಯೂ ಆಸಕ್ತಿ ಹೊಂದಿರುತ್ತಾರೆ.















































































































































































error: Content is protected !!
Scroll to Top