ಶ್ರೀ ವೆಂಕಟರಮಣ ಪ್ರಥಮ ದರ್ಜೆ ಕಾಲೇಜಿನಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ

ಉಡುಪಿ: ಜಿಲ್ಲಾಡಳಿತ ಉಡುಪಿ, ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಉಡುಪಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಕಾರ್ಕಳ , ಸಾರ್ವಜನಿಕ ಆಸ್ಪತ್ರೆ ಕಾರ್ಕಳ, ಸರಕಾರಿ ಬಿ.ಎಸ್.ಸಿ ನರ್ಸಿಂಗ್ ಕಾಲೆಜು ಕಾರ್ಕಳ ಮತ್ತು ಶ್ರೀ ವೆಂಕಟರಮಣ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಇದರ ಸಂಯುಕ್ತ ಆಶ್ರಯದಲ್ಲಿ ಎಚ್.ಐ.ವಿ/ ಏಡ್ಸ್ ತಡೆಗಟ್ಟುವಿಕೆ ಹಾಗೂ ಜಾಗೃತಿಯನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಐ.ಇ.ಸಿ ಪ್ರಚಾರ ಆಂದೋಲನ ಕಾರ್ಯಕ್ರಮವು ನಡೆಯಿತು.

ಸರ್ಕಾರಿ ಬಿ.ಎಸ್. ಸಿ. ನರ್ಸಿಂಗ್ ಕಾಲೇಜು ಕಾರ್ಕಳ ಇಲ್ಲಿನ ವಿದ್ಯಾರ್ಥಿಗಳಿಂದ ಫ್ಳ್ಯಾಶ್ ಮಾಬ್/ ಬೀದಿನಾಟಕ ಪ್ರದರ್ಶನವನ್ನು ನಮ್ಮ ವಿದ್ಯಾರ್ಥಿಗಳಿಗೆ ನೀಡಿದರು. ವೇದಿಕೆಯಲ್ಲಿ ಬಿಂದಿಯಾ ಶೆಟ್ಟಿ, ಆಪ್ತ ಸಮಾಲೋಚಕರು, ಸರಕಾರಿ ಆಸ್ಪತ್ರೆ ಕಾರ್ಕಳ ಮತ್ತು ಶ್ರೀಮತಿ ಕೆ. ಸುಶೀಲಾ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕಾರ್ಕಳ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಪ್ರೋ.ಗೀತಾ. ಜಿ. ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಭಾಗ್ಯ, ಎನ್.ಎಸ್.ಎಸ್ ಘಟಕದ ನಾಯಕಿಯರಾದ ಮುನೀರಾ ಮತ್ತು ರಮ್ಯ ಉಪಸ್ಥಿತರಿದ್ದರು.

ಆಶೀಯಾ ಕಾರ್ಯಕ್ರಮ ನಿರೂಪಿಸಿ, ಪೂಜಾ ವಂದಿಸಿದರು.























































error: Content is protected !!
Scroll to Top