ಕಾರ್ಕಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಂಬಾಡಿ ಪದವು, ನಿಟ್ಟೆ ಶಾಲೆಯು 50 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಸುವರ್ಣ ಸಂಭ್ರಮದ ಆಚರಣೆಗೆ ಸಜ್ಜಾಗಿದೆ.
ಈ ಹಿನ್ನೆಲೆ ಅಭಿವೃದ್ಧಿಯ ಜೊತೆಗೆ ಸುವರ್ಣ ಮಹೋತ್ಸವ ಎಂಬ ಧ್ಯೇಯದೊಂದಿಗೆ ಸುವರ್ಣ ಪಯಣ ಸಮಿತಿಯನ್ನು ರಚನೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಬೋಸ್ ಪ್ರಭಾಕರ್ ಕಾಮತ್, ಬಾಲಕೃಷ್ಣ ಹೆಗ್ಡೆ, ವಿನಯ್ ಹೆಗ್ಡೆ, ಸುರೇಶ್ ಆಚಾರ್ಯ ಸಮಿತಿಯಲ್ಲಿರಲಿದ್ದು, ಅಧ್ಯಕ್ಷರಾಗಿ ಪ್ರಮೀಳ ಶಶಿಧರ್ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ನವೀನ್ ನಾಯಕ್, ಉಪಾಧ್ಯಕ್ಷರುಗಳಾಗಿ ಡಾ| ಗಣೇಶ್ ಪೂಜಾರಿ, ಆನಂದ್ರಾಯ ನಾಯಕ್, ಶುಭವತಿ ಹೆಗ್ಡೆ, ಸುನಿಲ್ ಪೂಜಾರಿ, ರಾಜೇಶ್ ಕುಲಾಲ್, ಪ್ರಕಾಶ್ ಆಚಾರ್ಯ, ಜಯಂತ ಆಚಾರ್ಯ ಅವರನ್ನು ನೇಮಿಸಲಾಗಿದೆ. ಕಾರ್ಯದರ್ಶಿಗಳಾಗಿ ಪ್ರದೀಪ್ ನಾಯ್ಕ್, ಶಶಿಧರ ಆಚಾರ್ಯ ಕೋಶಾಧಿಕಾರಿಯಾಗಿ ಶಿವಾನಂದ ಆಯ್ಕೆ ಮಾಡಲಾಗಿದೆ.

ಶಾಲಾ ಎಸಡಿಎಂಸಿ, ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರನ್ನು ಒಳಗೊಂಡ ವಿವಿಧ ಉಪಸಮಿತಿಗಳನ್ನು ಈ ಸಂದರ್ಭದಲ್ಲಿ ರಚಿಸಲಾಯಿತು.

























