ಹೆಬ್ರಿಯ ನಾಡ್ಪಾಲು ಗ್ರಾಮ ಪಂಚಾಯತ್ ಗೆ ಕೇಂದ್ರ ಪಂಚಾಯತ್ ಮಂತ್ರಾಲಯ ಅಧಿಕಾರಿ ತಂಡದ ಭೇಟಿ
ಕಾರ್ಕಳ: ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಯ ಬಡತನ ಮುಕ್ತ ವಿಭಾಗದಲ್ಲಿ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾ.ಪಂ. ಗೆ ಪರಿಶೀಲನಾ ತಂಡದ ಅಧಿಕಾರಿಗಳು ಭೇಟಿ ನೀಡಿ ಕ್ಷೇತ್ರ ಪರಿಶೀಲನೆ ನಡೆಸಿದರು.
ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವಾಲಯದ ವಿಕಾಸ್ ಚಿಕ್ಕರ, Private Secretary , ಮತ್ತು ಕೆ. ನಾಗೇಶ್ವರ್ ರಾವ್ Consultant SoEPR, NIRD ಮತ್ತು PR ಇವರನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಆಡಳಿತಾಧಿಕಾರಿ, ಸಿಬ್ಬಂದಿ, ಸಂಜೀವಿನಿ ಸದಸ್ಯರುಗಳು ಹಾಗೂ ಗ್ರಾಮಸ್ಥರು ಸ್ವಾಗತಿಸಿದರು.

ಪಂಚಾಯತ್ ಕಛೇರಿಯ ಆಡಳಿತ ವ್ಯವಸ್ಥೆ, ಸುಸ್ಥಿರ ಅಭಿವೃದ್ದಿ, ವಿವಿಧ ವಿನೂತನ ಪ್ರಯೋಗ, ಸಾರ್ವಜನಿಕ ಸಹಭಾಗಿತ್ವ, ಸಾಮಾಜಿಕ, ಆರ್ಥಿಕ ಸೌಲಭ್ಯಗಳ ಕುರಿತು, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶೀತಲ್ ಇವರು ಪ್ರಸ್ತುತ ಪಡಿಸಿದರು. ದಾಖಲೆ ಪರಿಶೀಲನೆ ಮತ್ತು ಕ್ಷೇತ್ರ ಭೇಟಿ ನೀಡಲಾಯಿತು.
ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಉದಯ ಕುಮಾರ್ ಶೆಟ್ಟಿ, ಜಿ.ಪಂ.ಎಸ್.ಡಿ.ಜಿ ಕೋಶದ ಅನಿಲ್ ಕುಮಾರ್ ಶೆಟ್ಟಿ, ನಾಡ್ಪಾಲು ಗ್ರಾ.ಪಂ ನ ಆಡಳಿತಾಧಿಕಾರಿ ಡಾ.ವಿದ್ಯಾಧರ್ ಹೆಗ್ಡೆ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶೀತಲ್ , ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ದಿನೇಶ್ ಡಿ.ಇ. , ತಾಲೂಕು ಯೋಜನಾಧಿಕಾರಿಯಾದ ಶ್ರೀ ಸದಾಶಿವ ಸೇರ್ವೇಗಾರ್, ಕಾರ್ಯದರ್ಶಿ ಶೋಭಾವತಿ, ದೇವಕಿ, ಜಿಲ್ಲಾ ಪಂಚಾಯತ್ ಎಸ್.ಬಿ.ಎಮ್. ಕನ್ಸಲ್ಟಂಟ್ ರಘುನಾಥ್, ಮಾಜಿ ಅಧ್ಯಕ್ಷರುಗಳಾದ ದಿನೇಶ್ ಹೆಗ್ಡೆ, ನವೀನ್ ಕುಮಾರ್, ಮಾಜಿ ಉಪಾಧ್ಯಕ್ಷರು ಜಗಧೀಶ ಹೇರಳೆ, ಮಾಜಿ ಸದಸ್ಯರುಗಳು, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮಸ್ಥರು, ಸಂಜೀವಿನಿ ಪದಾಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರುಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ANF, ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.









































