ವಿಶ್ವಕರ್ಮ ಒಕ್ಕೂಟ: ಶೈಕ್ಷಣಿಕ ದತ್ತಿನಿಧಿ,ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿಶ್ವಕರ್ಮ ಸಮಾಜದ ಆರ್ಥಿಕವಾಗಿ ಹಿಂದುಳಿದ ಮತ್ತು ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಶೈಕ್ಷಣಿಕ ದತ್ತಿನಿಧಿ /ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

2025-26 ನೇ ಸಾಲಿನ ಎಸೆಸೆಲ್ಸಿ, ಪಿಯುಸಿ, ಅಂತಿಮ ಪರೀಕ್ಷೆಗಳಲ್ಲಿ ಶೇ.95ಕ್ಕಿಂತ ಅಧಿಕ, ಆರ್ಥಿಕವಾಗಿ ಹಿಂದುಳಿದ ಕನಿಷ್ಠ ಶೇ. 70 ಅಂಕ., ಪದವಿ ಪರೀಕ್ಷೆಯಲ್ಲಿ(ಬಿ.ಎ., ಬಿಕಾಂ ಇತ್ಯಾದಿ) ಶೇ. 80ಕ್ಕಿಂತ ಹೆಚ್ಚು ಎಂಜಿನಿಯರಿಂಗ್ (ಬಿಇ, ಬಿಟೆಕ್, ವಾಸ್ತುಶಿಲ್ಪಿಇತ್ಯಾದಿ), ಡಿಪ್ಲೊಮಾ (ಸಿವಿಲ್, ಮೆಕ್ಯಾನಿಕಲ್ ಇತ್ಯಾದಿ), ಎಬಿಬಿಎಸ್, ಬಿಎಎಂಎಸ್ ಮುಂತಾದ ವೈದ್ಯಕೀಯ ಶಿಕ್ಷಣ, ಸ್ನಾತಕೋತ್ತರ ಪದವಿ (ಎಂಎ, ಎಂಕಾಂ, ಎಂಎಸ್ಸಿ ಇತ್ಯಾದಿ), ವೃತ್ತಿ ಶಿಕ್ಷಣಗಳಾದ, ಬಿಎಡ್, ಡಿಎಡ್, ಬಿಸಿಎ, ಬಿಎಸ್ ಡಬ್ಲ್ಯು., ಎಲ್ ಎಲ್ ಬಿ, ಐಟಿಐ, ಬಿಎಪ್ ಎ (ಲಲಿತಕಲೆ) ಹಾಗೂ ವೈದಿಕ ಶಿಕ್ಷಣ ಪರೀಕ್ಷೆಗಳಲ್ಲಿ ಶೇ. 75ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಯ ಅಂಕಪಟ್ಟಿಯ ಪ್ರತಿಯೊಂದಿಗೆ ಹಾಗೂ ಗುರು- ಶಿಷ್ಯ ಪರಂಪರೆಯಲ್ಲಿ ಸಂಪರ್ಕಿಸಬಹುದು.

ಪಂಚಕಸುಬುಗಳ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ನಿಗದಿತ ನಮೂನೆಯ ಅರ್ಜಿಯಲ್ಲಿ ಬರೆದು ಸ್ಥಳೀಯ ವಿಶ್ವಕರ್ಮ ಸಮಾಜದ ಸಂಘ – ಸಂಸ್ಥೆಗಳ ಶಿಫಾರಸು ಪತ್ರ ದೊಂದಿಗೆ ನ. 21ರೊಳಗೆ ಅಲೆವೂರು ಯೋಗೀಶ ಆಚಾರ್ಯ, ವಿಶ್ವಕರ್ಮ ಒಕ್ಕೂಟ, ನ್ಯೂ ಮಂಗಳಾ ಜುವೆಲರ್ಸ್, ವಿ.ಕೆ. ಪ್ಯಾರಡೈಸ್ ಸಂಕೀರ್ಣ, ಉಡುಪಿ – 576101 ಈ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಕೆ. ಮುರಳೀಧರ (9448348200) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.



















































































error: Content is protected !!
Scroll to Top