ಕಾರ್ಕಳ: ತಾಲೂಕು ಕುಲಾಲ ಸುಧಾರಕ ಸಂಘ (ರಿ.) ಕಾರ್ಕಳ ಇದರ 31 ನೇ ವಾರ್ಷಿಕ ಮಹಾಸಭೆ ಶ್ರೀ ಸತ್ಯನಾರಾಯಣ ಪೂಜೆ,ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ,ಸಾಧಕರಿಗೆ ಸನ್ಮಾನ,ಕ್ರೀಡಾಕೂಟದ ಬಹುಮಾನ ವಿತರಣೆ,ಸಾಂಸ್ಕೃತಿಕ ಕಾರ್ಯಕ್ರಮವು ಕುಲಾಲ ಸಭಾಭವನದಲ್ಲಿ ನಡೆಯಿತು.
ಕಾರ್ಕಳ ತಾಲೂಕು ಕುಲಾಲ ಸಂಘದ ಅಧ್ಯಕ್ಷ ಹರೀಶ್ಚಂದ್ರ ಕುಲಾಲ್ ಇವರ ಅಧ್ಯಕ್ಷತೆಯಲ್ಲಿ, ಶಾಸಕ ವಿ ಸುನೀಲ್ ಕುಮಾರ್, ಡಾ ಆನಂದ ಕುಲಾಲ್, ರೇಖಾ ಪ್ರಭಾಕರ್, ಕೃಷ್ಣ ಮೂಲ್ಯ ಕಾರ್ಕಳ, ಭೋಜ ಕುಲಾಲ್ ಬೇಳಂಜೆ, ಧವಳಕೀರ್ತಿ, ಯೋಗೀಶ್ ಕುಲಾಲ್ ಪೆರ್ಡೂರು ,ಜಯರಾಮ ಬಂಗೇರ ಕೆರ್ವಾಶೆ, ಮಹೇಶ್ ಕುಲಾಲ್ ಅರ್ತಿಮೂಲೆ, ಮಹೇಶ್ ಕುಲಾಲ್ ಬೇಲಾಡಿ, ಎಚ್. ಡಿ. ಕುಲಾಲ್ ಹಿರ್ಗಾನ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಂಧುಗಳ ಉಪಸ್ಥಿತಿಯಲ್ಲಿ ಮಹಾಸಭೆ ಜರಗಿತು.
ವರದಿ, ಕಾರ್ಯಕಾರಿ ಮಂಡಳಿ ಆಯ್ಕೆ,ವಾರ್ಷಿಕ ಲೆಕ್ಕಪತ್ರ ಮಂಡಿಸಲಾಯಿತು.
95% ಕ್ಕಿಂತ ಅಧಿಕ ಅಂಕಗಳಿಸಿದ 20 ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು,ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ,ರಾಜೇಶ್ ಪಿ ಹೊಸ್ಮಾರು,ಸತೀಶ್ ಬಂಗೇರ ಕರಿಯಕಲ್ಲು ,ಶಂಕರ್ ಸಾಣೂರು,ಶೀನ ಮೂಲ್ಯ ,ವೈಭವ್ ಆರ್, ಮನಸ್ವಿ ಕುಲಾಲ್,ಹರಿಶ್ಚಂದ್ರ ವಿ ಕುಲಾಲ್, ಸಾಕ್ಷೀ ಕುಲಾಲ್, ರಕ್ಷಿತ್ 9 ಜನ ಸಾಧಕರಿಗೆ ಸನ್ಮಾನಿಸಲಾಯಿತು ಎಚ್ ಡಿ ಕುಲಾಲ್ ರವರಿಗೆ “ಕುಲಾಲ ಮಾಣಿಕ್ಯ” ಬಿರುದನ್ನು ಶಾಸಕ ವಿ. ಸುನೀಲ್ ಕುಮಾರ್ ರವರು ನೀಡಿ ಗೌರವಿಸಿದರು. 85% ಕ್ಕಿಂತ ಅಧಿಕ ಅಂಕಗಳಿಸಿದ 95 ಮಕ್ಕಳಿಗೆ 1,62,600 ರೂಪಾಯಿ ವಿದ್ಯಾರ್ಥಿ ಪ್ರೋತ್ಸಾಹಧನ ನೀಡಲಾಯಿತು.

ದಿವಾಕರ್ ಎಂ. ಬಂಗೇರ ಸ್ವಾಗತಿಸಿದರು,ಮನಸ್ವೀ ಕುಲಾಲ್ ಪ್ರಾರ್ಥನೆಗೈದರು. ವಸಂತ್ ಜಾರ್ಕಳ ಧನ್ಯವಾದ ತಿಳಿಸಿದರು.









































