ಬೆಂಗಳೂರು: ಕರ್ನಾಟಕದ ಜನರಿಗೆ ನಂದಿನಿ ಹಾಲಿನ ದರ ಏರಿಕೆಯ ಬಿಸಿ ಜೊತೆಗೆ ಹಾಲಿನ ಉತ್ಪನ್ನಗಳ ಬೆಲೆಯ ತಾಪವೂ ತಟ್ಟುವ ಹಾಗಿದೆ.
ಐತಿಹಾಸಿಕ ನಿರ್ಧಾರ ಎಂಬಂತೆ ರಾಜ್ಯ ಸರ್ಕಾರ ಹಾಲಿನ ಬೆಲೆಯನ್ನು ನ. 1 ರಿಂದ ಜಾರಿಗೆ ಬರುವಂತೆ ಬರೋಬ್ಬರಿ 8 ರೂ. ಹೆಚ್ಚಿಸುವ ಮೂಲಕ ಜನರ ಜೇಬಿಗೆ ಬರೆ ಹಾಕಿದೆ. ಅದರೊಂದಿಗೆ ನಂದಿನಿ ಹಾಲಿನ ಉತ್ಪನ್ನಗಳ ಬೆಲೆಯೂ ಏರಿದ್ದು ಇದು ದೀಪಾವಳಿ ಸಂದರ್ಭದಲ್ಲಿ ಜನರಿಗೆ ಶಾಕ್ ನೀಡಿದೆ ಎನ್ನಬಹುದು.
ಹಾಲಿನ ಉತ್ಪನ್ನವಾದ ಮೊಸರಿನ ಬೆಲೆ ಏರಿಕೆ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಹಳೆಯ ಬೆಲೆ 28 ರೂಪಾಯಿ ಇತ್ತು, ಈಗ 6 ರೂಪಾಯಿ ಹೆಚ್ಚಳವಾಗಿ 34 ರೂಪಾಯಿಗೆ ಏರಿದೆ. ಹಳೆಯ ಬೆಲೆ 54 ರೂಪಾಯಿ ಇತ್ತು, ಈಗ ಬರೋಬ್ಬರಿ 14 ರೂಪಾಯಿ ದುಬಾರಿಯಾಗಿ 68 ರೂಪಾಯಿಗೆ ತಲುಪಿದೆ.

ಹೀಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೆ ಜೀವನ ಸಾಗಿಸುವುದು ಹೇಗೆ ಎಂಬ ಚಿಂತೆ ಜನಸಾಮಾನ್ಯರನ್ನು ಕಾಡುತ್ತಿದೆ.









































