ಹಿರಿಯ ನಟ, ನಿರ್ದೇಶಕ ಜಗನಾಥ ಶೆಟ್ಟಿ ಮಂಗಳೂರು ಅವರಿಗೆ ‘ ರಂಗದ ಮಾಷ್ಟ್ರು’ ಬಿರುದು ಪ್ರದಾನ

ಮಂಗಳೂರು: ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಪ್ರಯುಕ್ತ ನಿಟ್ಟೆ ಇಂಜಿನಿಯರಿಂಗ್ ಕಾಲೇಜು ಸಂಭ್ರಮ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗಭೂಮಿಯ ಹಿರಿಯ ಕಲಾವಿದರು ಡೆನ್ನಾನ ಕಲಾವಿದರು ಕಾರ್ಕಳ ತಂಡದ ನಿರ್ದೇಶಕರು ಹಾಗೂ ಅನೇಕ ಸಂಘ ಸಂಸ್ಥೆಗಳ ನಾಟಕಗಳಿಗೆ ನಿರ್ದೇಶನ ನೀಡಿ ತನ್ನ ಕಲಾ ಸೇವೆಯನ್ನು ಮುಂದುವರೆಸುತ್ತಿರುವ ಜಗನಾಥ ಶೆಟ್ಟಿ ಮಂಗಳೂರು ಇವರಿಗೆ “ರಂಗದ ಮಾಷ್ಟ್ರು” ಎಂಬ ಬಿರುದು ಪ್ರದಾನ ಮಾಡಲಾಯಿತು.

ಈ ಸಂದರ್ಭ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಚಿಪ್ಳೂಣ್ಕರ್, ಉಪಪ್ರಾಂಶುಪಾಲ ಡಾ. ನಾಗೇಶ್ ಪ್ರಭು, ಕ್ಯಾಂಪಸ್ ನಿರ್ವಹಣೆ ಹಾಗೂ ಅಭಿವೃದ್ಧಿ ವಿಭಾಗದ ನಿರ್ದೇಶಕ ಯೋಗೀಶ್ ಹೆಗ್ಡೆ, ನಿವೃತ್ತ ಉಪಪ್ರಾಂಶುಪಾಲ ಡಾ. ಶ್ರೀನಿವಾಸ ರಾವ್, ಕಾರ್ಕಳದ ಉದ್ಯಮಿ ಅಶೋಕ್ ಅಡ್ಯಂತಾಯ, ದೇರಳಕಟ್ಟೆ ಎ. ಬಿ. ಶೆಟ್ಟಿ ಡೆಂಟಲ್ ಕಾಲೇಜಿನ ನಿವೃತ್ತ ಡೀನ್ ಡಾ. ಶ್ರೀಧರ್ ಶೆಟ್ಟಿ, ಆಸ್ಟ್ರೇಲಿಯಾದ ಮನಶಾಸ್ತ್ರ ತಜ್ಞ ಡಾ. ನವೀನ್‌ಚಂದ್ರ ಶೆಟ್ಟಿ, ಕುದುರೆಮುಖ ವೈಲ್ಡ್ ಲೈಫ್ ಕಾರ್ಕಳ ಉಪವಿಭಾಗದ ಎಸಿಎಫ್ ಲತಾ ಗುರು ಭಟ್, ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಿನ್ಸಿಪಾಲ್ ಡಾ. ಮಂಜುನಾಥ್ ಕೋಟ್ಯಾನ್, ಕಾರ್ಕಳದ ಉದ್ಯಮಿ ಸುಶಾಂತ್ ಉಪಸ್ಥಿತರಿದ್ದರು.

ಬಳಿಕ ಡೆನ್ನಾನ ಕಲಾವಿದರು ಕಾರ್ಕಳ ಅಭಿನಯದ ಈ ವರ್ಷದ ಸೂಪರ್ ಹಿಟ್ ನಾಟಕ ‘ಗೆಜ್ಜೆ’ ಪ್ರದರ್ಶನಗೊಂಡಿತು.



























































































































error: Content is protected !!
Scroll to Top