ಕಾರ್ಕಳ: ಡಾ. ಎನ್. ಎಸ್. ಎ. ಎಂ. ಪದವಿ ಪೂರ್ವ ಕಾಲೇಜು ನಿಟ್ಟೆ ( ಪ್ರೌಢ ಶಾಲಾವಿಭಾಗ) ಇವರ ಸಹಯೋಗದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2026-27 ಸಂಪನ್ನಗೊಂಡಿತು.
ಸಮಾರಂಭದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಾ ನೆರವೇರಿಸಿದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಕಾರ್ಕಳ ತಾಲೂಕು ಸಾಹಿತ್ಯ ಸಂಘದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಇಂದಿರಾ, ಡಾ. ಎನ್. ಎಸ್. ಎ. ಎಂ. ಪ. ಪೂ. ಕಾಲೇಜಿನ ಆಡಳಿತಾಧಿಕಾರಿ ಡಾ. ಪ್ರಕಾಶ್ ಶೆಣೈ, ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ರಾಧಾ ಪ್ರಭು, ನಿಟ್ಟೆ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಶಿವಾನಂದ ಕುಂಟಾಡಿ ಉಪಸ್ಥಿತರಿದ್ದು ಶುಭ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಶಾಲಾ ಸಂಸತ್ತಿನ ನಾಯಕಿ ಯಶಸ್ವಿ ವೈ. ಆಚಾರ್ಯ, ಉಪನಾಯಕ ವಿಜೇಶ್ ಆಚಾರ್ಯ ಹಾಗೂ ಶಿಕ್ಷಣ ಮಂತ್ರಿ ಖ್ಯಾತಿ ಭಾಗವಹಿಸಿದ್ದರು.
CRP ಶಿವಾನಂದ ಸ್ವಾಗತಿಸಿದರು.
ಅತಿಥೇಯ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿಯರಾದ ಖ್ಯಾತಿ, ಯಶಸ್ವಿ ಆಚಾರ್ಯ,ಪೃ ಥ್ವಿ, ದೀಕ್ಷಾ ಮೂಲ್ಯ, ದೀಕ್ಷಾ ದೇವಾಡಿಗ, ದೀಕ್ಷಾ ಎಸ್. ಮೂಲ್ಯ ಪ್ರಾರ್ಥಿಸಿದರು.ಪ್ರೌಢ ಶಾಲಾ ಹಿರಿಯ ಶಿಕ್ಷಕ ಚಂದ್ರ ನಾಯ್ಕ್ ಟಿ. ನಿರೂಪಿಸಿದರು. ಕನ್ನಡ ಭಾಷಾ ಶಿಕ್ಷಕಿ ಸುರೇಖಾ ಶೆಟ್ಟಿ ಧನ್ಯವಾದ ಸಮರ್ಪಿಸಿದರು.
ನಿಟ್ಟೆ ಕ್ಲಸ್ಟರ್ ನ 17 ಶಾಲಾ ಕಾಲೇಜುಗಳಿಂದ ಸುಮಾರು 350 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 50 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತೀರ್ಪುಗಾರ ಶಿಕ್ಷಕರು ಹಾಗೂ crp ಗಳು ಭಾಗವಹಿಸಿದ್ದರು.ವಿವಿಧ ಸ್ಪರ್ಧೆಗಳಾದ ಆಕರ್ಷಣೀಯ ಜಾನಪದ ನೃತ್ಯ, ಅಭಿನಯ ಗೀತೆ, ಭರತ ನಾಟ್ಯ, ಕ್ಲೇ ಮಾಡಲ್, ರಂಗೋಲಿ, ಚಿತ್ರ ಕಲೆ, ಕಂಠ ಪಾಠ, ಭಾಷಣ, ಮಿಮಿಕ್ರಿ ಇನ್ನೂ ಹಲವಾರು ಸ್ಪರ್ಧೆಗಳು ಜರುಗಿದವು.





























































