ಡಾ. ಶಿವರಾಮ ಕಾರಂತರ ಕುರಿತು ಅರಿವಿನ ಬೆಳಕು ಉಪನ್ಯಾಸ -19

ಟ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ಮತ್ತು ಶ್ರೀ ವೆಂಕಟರಮಣ ಪ್ರಥಮ ದರ್ಜೆ ಕಾಲೇಜು, ಕಾರ್ಕಳ ಇದರ ಲಲಿತ ಕಲಾ ಸಂಘದ ವತಿಯಿಂದ ಸಂಯುಕ್ತ ಆಶ್ರಯದಲ್ಲಿ ಡಾ. ಶಿವರಾಮ ಕಾರಂತರ ಕುರಿತು ಅರಿವಿನ ಬೆಳಕು ಉಪನ್ಯಾಸ -19 ಕಾರ್ಯಕ್ರಮ ನಡೆಯಿತು.


ಎಸ್.ವಿ.ಎಜ್ಯುಕೇಷನ್‌ನ ಕಾರ್ಯದರ್ಶಿಯ ಕೆ.ಪಿ.ಶೆಣೈ ಕಾರ್ಯಕ್ರಮ ಉದ್ಘಾಟಿಸಿದರು.

ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಆಶಯ ನುಡಿಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗೀತಾ ಜಿ. ಅವರು ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಸೀತಾರಾಮ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ. ಶಿವರಾಮ ಕಾರಂತ ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಸ್ವಾಗತಿಸಿದರು. ಸಹನಾ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ನಿರೀಕ್ಷಾ ಧನ್ಯವಾದ ಸಮರ್ಪಿಸಿದರು.

ಯಕ್ಷ ರಂಗಾಯಣ ಕಾರ್ಕಳ ಇವರು ‘ಕಾರಂತ ಕಥನ’ ರಂಗಪ್ರದರ್ಶನ ಅಭಿನಯಿಸಿದರು.



















































































error: Content is protected !!
Scroll to Top