ಕಾರ್ಕಳ : ಕಾರ್ಕಳ ಪೇಟೆಯ ಕೇಂದ್ರ ಭಾಗದಲ್ಲಿರುವ ಕ್ರೆಸ್ಟ್‌ಕಿಂಗ್ ವಿದ್ಯಾ ಸಂಸ್ಥೆ ಉತ್ತಮ ಶಿಕ್ಷಣ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದೆ. ತಾಲೂಕಿನ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಅತ್ಯಾಧುನಿಕ ವ್ಯವಸ್ಥೆಯೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಶಿಕ್ಷಣವನ್ನು ನೀಡುತ್ತಿರುವ ಈ ಸಂಸ್ಥೆಯಲ್ಲಿ ಎರಡು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಪ್ಲೇ ಸ್ಕೂಲ್, ಎಲ್.ಕೆ.ಜಿ. ಯಿಂದ ಪಿಯುಸಿ ತನಕದ ಶಿಕ್ಷಣ ಲಭ್ಯವಿದೆ.
ಕೇವಲ ಅಂಕಗಳಿಗೆ ಮಾತ್ರ ಪ್ರಾಮುಖ್ಯತೆ ನೀಡದೆ ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಸಾಂಸ್ಕೃತಿಕ, ಕ್ರೀಡಾ, ವೈಜ್ಞಾನಿಕ ಸಾಧನೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈ ಹಿನ್ನಲೆಯಲ್ಲಿ ಅನೇಕ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಧನೆ ಮಾಡಿದ್ದಾರೆ. 2019-20ನೇ ಸಾಲಿನಲ್ಲಿ ವಿವಿಧ ಹಂತ ಮತ್ತು ಕ್ಷೇತ್ರಗಳಲ್ಲಿ 168 ಪ್ರಶಸ್ತಿಗಳನ್ನು ಗೆದ್ದು ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿದ್ದಾರೆ. ವಿಶೇಷವಾಗಿ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ವಿದ್ಯಾರ್ಥಿಗಳನ್ನು ತಯಾರು ಮಾಡಲು ವಿಶೇಷ ತಜ್ಞರನ್ನು ನೇಮಕ ಮಾಡಲಾಗಿದೆ. ಕರಾಟೆ, ನೃತ್ಯ, ಯಕ್ಷಗಾನ, ಸಂಗೀತ ಮುಂತಾದ ಚಟುವಟಿಕೆಗಳನ್ನು ವಾರದ ವಿವಿಧ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಉತ್ತಮ ಸೌಕರ್ಯಗಳನ್ನು ಹೊಂದಿರುವ ಈ ಸಂಸ್ಥೆಯಲ್ಲಿ ಪ್ಲೇ ಸ್ಟೇಷನ್, ಚಿಲ್ಡ್ರನ್ಸ್ ಪಾರ್ಕ್, ಕ್ಯಾಂಟೀನ್, ಕ್ರೀಂ ಪಾರ್ಲರ್ ವ್ಯವಸ್ಥೆಯಿದೆ. ಉತ್ತಮ ಗ್ರಂಥಾಲಯ, ಪ್ರಯೋಗಾಲಯ, ತರಗತಿ ತಂತ್ರಜ್ಞಾನ , ಲಭ್ಯವಿದೆ. ಶಿಸ್ತಿಗೆ ಹೆಸರಾಗಿರುವ ಕ್ರೆಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯ ಮೇಲೆ ಪೋಷಕರು ಉತ್ತಮ ಭರವಸೆಯನ್ನು ಹೊಂದಿದ್ದಾರೆ.
ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ ಪಡೆಯುವವರಿಗೆ ವಾಣಿಜ್ಯ ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ, ಲೆಕ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಕ ವಿಜ್ಞಾನ ಹಾಗೂ ಸಂಖ್ಯಾಶಾಸ್ತ್ರ ವಿಷಯಗಳಿದ್ದರೆ, ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಗಣಕ ವಿಜ್ಞಾನ ಹಾಗೂ ಸಂಖ್ಯಾಶಾಸ್ತ್ರ ವಿಷಯಗಳು ಲಭ್ಯವಿದೆ. ಇದಕ್ಕೆ ಪೂರಕವಾಗಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನೀಟ್/ ಜೆಇಇ/ ಸಿಇಟಿ ತರಬೇತಿಯನ್ನು ದೆಹಲಿ, ಹೈದರಾಬಾದ್ ಹಾಗೂ ಬೆಂಗಳೂರಿನ ತಜ್ಞ ಉಪನ್ಯಾಸಕರಿಂದ ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಹಲವಾರು ವಿದ್ಯಾರ್ಥಿಗಳು ಜೆಇಇ ಮೈನ್ಸ್ ಮತ್ತು ಆರ್ಕಿಟೆಕ್ಟರ್ ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತಜ್ಞ ಶಿಕ್ಷಕರು ಸಿಎ/ಸಿಎಸ್ ತರಬೇತಿ ನೀಡುತ್ತಿದ್ದಾರೆ. 2019-20ನೇ ಸಾಲಿನಲ್ಲಿ ಎಸ್.ಎಸ್.ಎಲ್,ಸಿಯಲ್ಲಿ 100% ಫಲಿತಾಂಶ. 2018-19 ಮತ್ತು 2019-20 ರಲ್ಲಿ ಸತತವಾಗಿ ಪಿ.ಯು.ಸಿ ವಿಜ್ಞಾನ ಮತ್ತು ವಾಣಿಜ್ಯ ಎರಡೂ ವಿಭಾಗಗಳಲ್ಲಿ 100% ಫಲಿತಾಂಶ ದಾಖಲಿಸಿದ ತಾಲೂಕಿನ ಏಕೈಕ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಕ್ರೆಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆ ಪಾತ್ರವಾಗಿದೆ.
ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಐ.ಐ.ಟಿ., ಮೆಡಿಕಲ್, ಐ.ಎ.ಎಸ್. ನಂತಹ ಕ್ಷೇತ್ರಕ್ಕೆ ಸಿದ್ದಪಡಿಸಲು ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಕೌಶಲ್ಯಾಭಿವೃದ್ಧಿ ವಿಷಯಗಳನ್ನು 5ನೇ ತರಗತಿಯಿಂದ 10ನೇ ತರಗತಿಯವರೆಗೆ ಪಠ್ಯ ವಿಷಯಗಳೊಂದಿಗೆ ಬೋಧಿಸಲಾಗುತ್ತದೆ. ವಿಜ್ಞಾನ ಕ್ಲಬ್‌ನ ಆಶ್ರಯದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಸಿದ್ದಪಡಿಸಲು ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ. ವಿಜ್ಞಾನ ಕ್ಲಬ್‌ನ ಆಶ್ರಯದಲ್ಲಿ ವಿದ್ಯಾರ್ಥಿಗಳು ಹಲವಾರು ರಾಜ್ಯಮಟ್ಟದ ಬಹುಮಾನಗಳನ್ನು ಪಡೆದಿದ್ದಾರೆ. ಸಂಸ್ಥೆಯ ಹಲವು ವಿದ್ಯಾರ್ಥಿಗಳು ನೃತ್ಯ, ನಾಟಕ, ಸಂಗೀತ ಕ್ಷೇತ್ರದಲ್ಲಿ ಟಿ.ವಿ ಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ.
ಉಚಿತ ಶಿಕ್ಷಣ ಮತ್ತು ಶುಲ್ಕ ರಿಯಾಯಿತಿ
ಪ್ರತಿಭಾನ್ವಿತರಿಗೆ, ಸಾಧಕರಿಗೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಉಚಿತ ಮತ್ತು ಶುಲ್ಕ ರಿಯಾಯಿತಿಯಲ್ಲಿ ಶಿಕ್ಷಣ ನೀಡುತ್ತಾ ಬಂದಿದೆ. 10ನೇ ತರಗತಿಯಲ್ಲಿ 90% ಅಂಕ ಪಡೆದವರಿಗೆ ಅರ್ಧ ಶುಲ್ಕ. 95% ಅಂಕ ಪಡೆದವರಿಗೆ ಪಿಯುಸಿಯಲ್ಲಿ ಉಚಿತ ಶಿಕ್ಷಣ ವ್ಯವಸ್ಥೆಯಿದೆ. ಅಲ್ಲದೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮತ್ತು ಉಚಿತ ಶಿಕ್ಷಣದ ವ್ಯವಸ್ಥೆಯಿದೆ.
ಸುಸಜ್ಜಿತ ಪ್ರತ್ಯೇಕ ಪಿಯುಸಿ ವಿಭಾಗ
ಈ ವರ್ಷ ಅತ್ಯುತ್ತಮ ಮತ್ತು ಅತ್ಯಾಧುನಿಕ ಪ್ರಯೋಗಾಲಯ ಹಾಗೂ ಗ್ರಂಥಾಲಯಗಳನ್ನು ಒಳಗೊಂಡ ಪ್ರತ್ಯೇಕ ಕಟ್ಟಡ ಪಿಯುಸಿ ವಿಭಾಗಕ್ಕೆ ಸಿದ್ಧಗೊಳ್ಳಲಿದೆ. ವಿಶೇಷವಾಗಿ ಕೇಂದ್ರ ಸರಕಾರ ಪ್ರಾಯೋಜಿತ ಅಟಲ್ ಟಿಂಕರಿಂಗ್ ಲ್ಯಾಬ್ ಅಸ್ತಿತ್ವಕ್ಕೆ ಬಂದು ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯಾಭಿವೃದ್ಧಿಗೆ ಪುಷ್ಠಿ ನೀಡಲಿದೆ. ಇಲ್ಲಿ ಪಾಠಕಷ್ಟೆ ಪ್ರಾಮುಖ್ಯತೆ ಕೊಡದೆ ವಿದ್ಯಾರ್ಥಿಗಳ ಸೃಜನಾತ್ಮಕ ಬೆಳವಣಿಗೆಗಾಗಿ ಆಗಾಗ ವಿಷಯ ತಜ್ಞರು, ವಿದ್ವಾಂಸರಿಂದ ಪ್ರವಚನಗಳನ್ನು ಏರ್ಪಡಿಸಲಾಗುತ್ತಿದೆ. ಇದಲ್ಲದೆ ಎಲ್ಲ ನಾಡ ಮತ್ತು ರಾಷ್ಟ್ರೀಯ ಹಬ್ಬಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಪ್ರಶಸ್ತಿಗಳು
ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟ ಮತ್ತು ಸಾಧನೆಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿಗಳು ಸಂದಿರುತ್ತದೆ. ಬೆಸ್ಟ್ ಪಬ್ಲಿಕ್ ಸ್ಕೂಲ್ ಇನ್ ಕರ್ನಾಟಕ, ಬೆಸ್ಟ್ ಸ್ಕೂಲ್ ಇನ್ ಕರ್ನಾಟಕ ಫಾರ್ ಟೀಚಿಂಗ್-2019 , ಮೊಸ್ಟ್ ಎಡ್ಮಾಯರ್ಡ್ ಪಬ್ಲಿಕ್ ಸ್ಕೂಲ್ ಇನ್ ಕರ್ನಾಟಕ ಮುಂತಾದುವುಗಳು.
ಬೆಳವಣಿಗೆಗೆ ಪೂರಕ
8ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್ ವ್ಯವಸ್ಥೆ ಇದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಸ್ಥೆಯ ಆವರಣದಲ್ಲಿ ಕ್ಯಾಂಟೀನ್ ಇದ್ದು ಶುಚಿರುಚಿಯಾದ ಊಟ ಮತ್ತು ಉಪಹಾರ ಒದಗಿಸಲಾಗುತ್ತಿದೆ. ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ಅಂಕದ ಆಧಾರದಲ್ಲಿ ಪ್ರವೇಶಾತಿಯನ್ನು ಒದಗಿಸದೆ, ಸೇರ್ಪಡೆಗೊಂಡ ಎಲ್ಲಾ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯುವತ್ತ ಶ್ರಮಿಸಲಾಗುತ್ತಿದೆ.
ಸಂಸ್ಥೆಯ ಆಡಳಿತ ಮಂಡಳಿಯ ಸಹಕಾರದಿಂದ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವ ಸಿಬ್ಬಂದಿ ವರ್ಗದಿಂದ ಈ ಸಾಧನೆ ಸಾಧ್ಯವಾಗಿದೆ.