ಸಾಮುದಾಯಿಕ ಹರಡುವಿಕೆಯನ್ನು ದೃಢಪಡಿಸಿದ ಮೊದಲ ರಾಜ್ಯ
ತಿರುವನಂತಪುರ : ತಿರುವನಂತಪುರ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸಮುದಾಯಕ್ಕೆ ಹರಡಲು ಶುರುವಾಗಿದೆ. ಈ ಮೂಲಕ ಕೊರೊನಾ ಸಮುದಾಯಕ್ಕೆ ಹರಡಿರುವುದನ್ನು ಸರಕಾರಿ ಮಟ್ಟದಲ್ಲಿ ದೃಢಪಡಿಸಿದ ಮೊದಲ ರಾಜ್ಯವಾಗಿದೆ ಕೇರಳ.
ಅಜ್ಞಾತ ಮೂಲಗಳಿಂದ ಕೊರೊನಾ ಸೋಂಕಿತರಾಗುವವರ ಹೆಚ್ಚುತ್ತಿದ್ದರೆ ಮತ್ತು ಕ್ಲಸ್ಟರ್ ಮಟ್ಟದಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದರೆ ವೈರಸ್ ಸಮುದಾಯಕ್ಕೆ ಹರಡಲು ಶುರುವಾಗಿದೆ ಎಂದು ಅರ್ಥ. ರಾಜ್ಯ ರಾಜಧಾನಿಯಲ್ಲಿ ಈ ಎಲ್ಲ ಲಕ್ಷಣಗಳು ಕಂಡು ಬಂದಿವೆ.
ಸರಕಾರ ಜನರ ಓಡಾಟಗಳ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸುವುದೊಂದೇ ವೈರಸ್ ಹರಡುವುದನ್ನು ತಡೆಯಲು ಇರುವ ಮಾರ್ಗ.