ಕಾರ್ಕಳ : ಯಕ್ಷಮಿತ್ರರು ದುರ್ಗ ಇವರ ಆಶ್ರಯದಲ್ಲಿ ಜು.9ರಂದು ಮಧ್ಯಾಹ್ನ 2 ಗಂಟೆಗೆ ಶ್ರೀ ಹರಿಹರೇಶ್ವರ ದೇವಸ್ಥಾನ ದುರ್ಗ ಹರಿಹರ ಸಭಾಭವನದಲ್ಲಿ ʼಸಂಧಾನ ಭೇದನʼ ತಾಳಮದ್ದಳೆ ನಡೆಯಲಿದೆ.
ಭಾಗವರಾಗಿ ರವಿಚಂದ್ರ ಕನ್ನಡಿಕಟ್ಟೆ, ಮದ್ದಳೆಯಲ್ಲಿ ಚೈತನ್ಯ ಪದ್ಯಾಣ, ಚಂಡೆಯಲ್ಲಿ ರವಿರಾಜ್ ಜೈನ್ ಕಾರ್ಕಳ, ಅರ್ಥದಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ಟ, ರಾಧಾಕೃಷ್ಣ ಕಲ್ಚಾರ್ ವಿಟ್ಲ, ವಿದ್ವಾನ್ ಗಣಪತಿ ಭಟ್ಟ ಸಂಕದಗುಂಡಿ, ಪವನ ಕಿರಣಕೆರೆ, ರಜನೀಶ್ ಹೊಳ್ಳ ಕೆಂಪಿನಮಕ್ಕಿ, ಮಹಾವೀರ ಪಾಂಡಿ ಸಹಕರಿಸಲಿರುವರು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆ. 9 : ಯಕ್ಷಮಿತ್ರರು ದುರ್ಗ – ಸಂಧಾನ ಭೇದನ ತಾಳಮದ್ದಳೆ














