ಜು. 25 : ನೀಟ್ ಪರೀಕ್ಷೆ ಅಕ್ರಮ – ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ – ಕಾಂಗ್ರೆಸ್ ನಾಯಕರ ಬಂಧನ ಖಂಡಿಸಿ ಕಾರ್ಕಳದಲ್ಲಿ ಧರಣಿ ಸತ್ಯಾಗ್ರಹ

ಕಾರ್ಕಳ : ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಕಳ ಹಾಗೂ ಎನ್‌ಎಸ್‌ಯುಐ (NSUI) ಕಾರ್ಕಳ ಆಶ್ರಯದಲ್ಲಿ ನೀಟ್ ಪರೀಕ್ಷೆ ಅಕ್ರಮ, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಹಾಗೂ ಕಾಂಗ್ರೆಸ್ ನಾಯಕರ ಬಂಧನ ಖಂಡಿಸಿ ಜು. 25ರಂದು ಬೆಳಿಗ್ಗೆ 9 ರಿಂದ ರಾತ್ರಿ 8 ಗಂಟೆಯವರೆಗೆ ಅನಂತಶಯನ ವೃತ್ತದ ಬಳಿ ಧರಣಿ ಸತ್ಯಾಗ್ರಹ ನಡೆಯಲಿದೆ. ಸಭೆಯಲ್ಲಿ ಮಾನವ ಸರಪಳಿ, ಸಾರ್ವಜನಿಕ ಸಂವಾದ‌ ಮತ್ತು ಮೃತ ವಿದ್ಯಾರ್ಥಿಗಳಿಗೆ‌ ಮೊಂಬತ್ತಿ ಹಚ್ಚಿ ಶೃದ್ದಾಂಜಲಿಯನ್ನು ಸಲ್ಲಿಸಲಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





























error: Content is protected !!
Scroll to Top