ಕಾರ್ಕಳ : ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಕಮರ್ಷಿಯಲ್ ಏವಿಯೇಷನ್ ಪೈಲಟ್ ಆಗಿರುವ ರಂಗನಪಲ್ಕೆ ನಿವಾಸಿ ಶೈನಿ ಆಸ್ಮಾ ಸಲ್ದಾನ ಇವರನ್ನು ಶ್ರೀಮದ್ಭುವನೇಂದ್ರ ಪ್ರೌಢಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆರ್. ನಾರಾಯಣ ಶೆಣೈ ಸ್ವಾಗತಿಸಿ ಪರಿಚಯಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾಕಿಣಿ ಹಾಗೂ ಶಿಕ್ಷಕ ವೃಂದದವರು ಶೈನಿ ಅವರನ್ನು ಸನ್ಮಾನಿಸಿದರು. ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶ್ರೀಮದ್ಭುವನೇಂದ್ರ ಪ್ರೌಢಶಾಲೆಯಲ್ಲಿ ಶೈನಿ ಆಸ್ಮಾ ಸಲ್ದಾನಗೆ ಸನ್ಮಾನ



























