ಎಂಪಿಎಂ ಕಾಲೇಜು ಪ್ರಾಂಶುಪಾಲರಾಗಿ ಡಾ. ರೋಷನ್‌ ಫೆರ್ನಾಂಡಿಸ್‌ ಅಧಿಕಾರ ಸ್ವೀಕಾರ

ಕಾರ್ಕಳ : ಪ್ರಥಮ ದರ್ಜೆ ಕಾಲೇಜು ಕಾರ್ಕಳ ಇದರ ನೂತನ ಪ್ರಾಂಶುಪಾಲರಾಗಿ ಡಾ. ರೋಷನ್‌ ಫೆರ್ನಾಂಡಿಸ್‌ ಅವರು ನ. 20ರಂದು ಅಧಿಕಾರ ಸ್ವೀಕರಿಸಿದರು. ಮೂಲತಃ ಮಂಗಳೂರಿನ ಇವರು ಎಂಐಟಿ ಮಣಿಪಾಲದಲ್ಲಿ ಬಿ.ಇ ಪೂರೈಸಿರುತ್ತಾರೆ. ಮೈಸೂರು ಜಯಚಾಮರಾಜೇಂದ್ರ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂ.ಟೆಕ್‌ ನಲ್ಲಿ ಚಿನ್ನದ ಪದಕದೊಂದಿಗೆ ತೇರ್ಗಡೆ ಹೊಂದಿರುವ ಇವರು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪಿ.ಎಚ್‌ಡಿ ಮಾಡಿರುತ್ತಾರೆ.
ಕಳೆದ 22 ವರ್ಷಗಳಿಂದ ನಿಟ್ಟೆ ಇಂಜಿಯರಿಂಗ್‌ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌/ ಸೈಬರ್‌ ಸೆಕ್ಯೂರಿಟಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಈ ವೇಳೆ ಉಡುಪಿ ಮತ್ತು ದ.ಕ. ಜಿಲ್ಲೆಯ ವಿವಿಧೆಡೆ ಸೈಬರ್‌ ಕ್ರೈಮ್‌ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಭಾಗವಹಿಸಿರುತ್ತಾರೆ. ರೋಷನ್‌ ಅವರು ಕೆಇಎ ನಡೆಸಿದ ಪರೀಕ್ಷೆಯಲ್ಲಿ 71ನೇ ರ್‍ಯಾಂಕ್ ನೊಂದಿಗೆ ಪ್ರಾಂಶುಪಾಲರ ಹುದ್ದೆಗೆ ನೇಮಕಗೊಂಡಿರುತ್ತಾರೆ.





























































































































error: Content is protected !!
Scroll to Top