ನಮ್ಮ ಕರ್ನಾಟಕ ರಾಜ್ಯದಲ್ಲಿ ದನ, ಎಮ್ಮೆ, ಇವುಗಳ ಕರುಗಳು, ಹೋರಿ ಇವುಗಳ ಹತ್ಯೆಯನ್ನು ತಡೆಗಟ್ಟಲು ಮತ್ತು ಗೋವುಗಳನ್ನು ಸಂರಕ್ಷಿಸಲು ೧೯೬೪ನೇ ಆಗಸ್ಟ್ ತಿಂಗಳ ೧೪ ರಂದು ರಾಜ್ಯ ಸರ್ಕಾರವು ಕರ್ನಾಟಕ ಗೋಹತ್ಯೆ ತಡೆಗಟ್ಟುವಿಕೆ ಮತ್ತು ದನಗಳ ಸಂರಕ್ಷಣಾ ಕಾಯ್ದೆ, ೧೯೬೪ ಎಂಬ ಕಾನೂನನ್ನು ರಾಜ್ಯದಾದ್ಯಂತ ಜ್ಯಾರಿಗೆ ತಂದಿರುತ್ತದೆ.
ಈ ಕಾನೂನಿನ ಪ್ರಕಾರ ಯಾವುದೇ ಕಾನೂನು, ಪದ್ಧತಿ ಅಥವಾ ಬಳಕೆಗೆ ವಿರುದ್ಧವಾಗಿ ಯಾವುದೇ ವ್ಯಕ್ತಿಯು ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರದ ಪ್ರಕಾರ ನೇಮಿಸಲ್ಪಟ್ಟ ಸಕ್ಷಮ ಪ್ರಾಧಿಕಾರದಿಂದ ಸೂಕ್ತ ಲಿಖಿತ ಪ್ರಮಾಣ ಪತ್ರವನ್ನು ಪಡೆಯದೇ ಮೇಲ್ಕಾಣಿಸಿದ ಪ್ರಾಣಿಯನ್ನು ವಧಿಸುವಂತಿಲ್ಲ. ಮಾತ್ರವಲ್ಲದೆ ವಧಿಸುವ ಉದ್ದೇಶಕ್ಕಾಗಿ ಅವುಗಳನ್ನು ರಾಜ್ಯದ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಿಸುವಂತಿಲ್ಲ, ಹಾಗೂ ವಧೆಗಾಗಿ ಮಾರಾಟ, ಖರೀದಿ ಅಥವಾ ವಿಲೇವಾರಿ ಮಾಡುವಂತಿಲ್ಲ. ಈ ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರದ ಪ್ರಕಾರದ ಅಪರಾಧ ನಡೆದಿದೆ ಅಥವಾ ನಡೆದಿರುವ ಸಾಧ್ಯತೆ ಇದೆಯೆಂದು ಮಾಹಿತಿ ಪಡೆದ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದಿಂದ ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿ ಅಥವಾ ವ್ಯಕ್ತಿಯು ಸಮ್ಮಂದಪಟ್ಟ ಆವರಣವನ್ನು ಪ್ರವೇಶಿಸಿ ಪರಿಶೀಲಿಸುವ ಕಾನೂನುಬದ್ದ ಅಧಿಕಾರವನ್ನು ಹೊಂದಿರುತ್ತಾನೆ ಮತ್ತು ಈ ಸಂದರ್ಭದಲ್ಲಿ ಇಂತಹ ಆವರಣ ಅಥವಾ ಕಟ್ಟಡಕ್ಕೆ ಸಮ್ಮಂದಪಟ್ಟ ವ್ಯಕ್ತಿಯು ಯಾವುದೇ ರೀತಿಯ ಅಡೆತಡೆಯನ್ನು ಒಡ್ಡುವಂತಿಲ್ಲ. ಈ ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರದ ವಿರುದ್ಧವಾಗಿ ನಡೆಸುವ ಕೃತ್ಯವು ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯವೆಂದು ರಾಜ್ಯ ಸರ್ಕಾರದಿಂದ ಅಧಿಕೃತಗೊಳಿಸಲ್ಪಟ್ಟ ಪಶು ವೈದ್ಯ ಅಧಿಕಾರಿಯಿಂದ ನಿಗದಿಪಡಿಸಬಹುದಾದ ಶರತ್ತುಗಳಿಗೆ ಒಳಪಟ್ಟು ಪ್ರಮಾಣೀಕರಿಸಲ್ಪಟ್ಟ ವಧೆಯು ಶಿಕ್ಷಾರ್ಹ ಅಪರಾಧವಾಗಿರುವುದಿಲ್ಲ ಮತ್ತು ರಾಜ್ಯ ಸರ್ಕಾರವು ಸ್ಥಾಪಿಸಿದ, ನಡೆಸಿದ ಅಥವಾ ಗುರುತಿಸಿದ ಸಂಸ್ಥೆಯಲ್ಲಿ ಲಸಿಕೆ, ದುಗ್ದರಸ ಸೀರಂ ಅಥವಾ ಯಾವುದೇ ಪ್ರಾಯೋಗಿಕ ಅಥವಾ ಸಂಶೋಧನಾ ಉದ್ದೇಶಕ್ಕಾಗಿ ಶಸ್ತç ಚಿಕಿತ್ಸೆ ಮಾಡಿದ ಯಾವುದೇ ಹಸು ಅಥವಾ ಪ್ರಾಣಿಯ ವಧೆಯು ಸಹಾ ಶಿಕ್ಷಾರ್ಹ ಅಪರಾಧವಾಗಿರುವುದಿಲ್ಲ. ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರದಂತೆ ರಾಜ್ಯ ಸರ್ಕಾರವು ತನ್ನ ಅಧಿಸೂಚನೆಯ ಮೂಲಕ ಯಾವುದೇ ಸ್ಥಳೀಯ ಪ್ರಾಧಿಕಾರಕ್ಕೆ ಅದರ ಅಧಿಕಾರ ವ್ಯಾಪ್ತಿಗೆ ಒಳಪಟ್ಟು ಅಧಿಕಾರವನ್ನು ಚಲಾಯಿಸುವಂತೆ ಮಾಡುವ ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ. ರಾಜ್ಯ ಸರ್ಕಾರವು ಹಸುಗಳು ಮತ್ತು ಇತರ ಪ್ರಾಣಿಗಳ ಸಂರಕ್ಷಣೆಯ ದೃಷ್ಟಿಯಿಂದ ರಾಜ್ಯ ಸರ್ಕಾರವು ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ ೧೯೬೦ರ ಅಡಿಯಲ್ಲಿ ನೊಂದಾಯಿಸಲಾದ ಯಾವುದೇ ಪ್ರಾಧಿಕಾರ ಅಥವಾ ಸಂಘವನ್ನು ಅಥವಾ ಖಾಸಗಿ ಸೇವಾ ಸಂಸ್ಥೆಯನ್ನು ಸ್ಥಾಪಿಸಲು ಸೂಕ್ತ ಅವಕಾಶ ನೀಡಬಹುದಾಗಿದೆ.

ಕರ್ನಾಟಕದಲ್ಲಿ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ ೨೦೨೦ ಎಂಬ ಕಾಯ್ದೆಯು ದಿನಾಂಕ ೨೫-೦೨-೨೦೨೧ ರಿಂದ ಜ್ಯಾರಿಗೆ ಬಂದಿದ್ದು ಇದರ ಪ್ರಕಾರ ಮೇಲ್ಕಾಣಿಸಿದ ಕಾನೂನನ್ನು ಇನ್ನಷ್ಟು ಬಲಪಡಿಸಲಾಗಿರುತ್ತದೆ. ಮಾತ್ರವಲ್ಲದೆ ಜಾನುವಾರು ಸಾಗಣೆ ನಿಯಮಗಳು ೨೦೨೧ರ ಪ್ರಕಾರ ಜಾನುವಾರುಗಳನ್ನು ಸಾಗಿಸುವ ಸಂದರ್ಭದಲ್ಲಿ ಸಮ್ಮಂದಪಟ್ಟ ವ್ಯಕ್ತಿಯು ಜಾನುವಾರುಗಳ ಮಾಲೀಕತ್ವದ ದಾಖಲೆ, ಪಶು ವೈದ್ಯಾಧಿಕಾರಿಗಳಿಂದ ಸಾಗಣೆ ಪ್ರಮಾಣಪತ್ರ, ಜಾನುವಾರುಗಳ ಆರೋಗ್ಯ ಮತ್ತು ಸಾಗಣೆಯ ಯೋಗ್ಯತೆ, ಸಾಗಾಟದ ವಾಹನದಲ್ಲಿ ಸೂಕ್ತ ಸ್ಥಳ ಅವಕಾಶ, ಆಹಾರ ನೀರು ಮತ್ತು ಗಾಳಯ ವ್ಯವಸ್ಥೆ, ಸಾಗಣೆಯ ಸಂದರ್ಭದಲ್ಲಿ ಪ್ರಾಣಿಗಳಿಗೆ ಗಾಯ ಅಥವಾ ಅನಾರೋಗ್ಯ ಉಂಟಾಗದAತೆ ನೋಡಿಕೊಳ್ಳುವ ಜವಾಬ್ದಾರಿ ಇತ್ಯಾದಿಗಳ ಬಗ್ಗೆ ಪ್ರಸ್ತಾವಿಸಲಾಗಿದೆ.































































