ನ. 28 : ಬಜಗೋಳಿಯಲ್ಲಿ 6ನೇ ವರ್ಷದ ಗೋದಾನ : ಡಾ. ಎಂ. ಮೋಹನ್ ಆಳ್ವರಿಗೆ ಬಿರುದು ಪ್ರದಾನ

ಕಾರ್ಕಳ : ಬಜಗೋಳಿಯ ಎಸ್.ಪಿ. ಗಾರ್ಡನ್ ನಲ್ಲಿ ನ. 28ರಂದು 6ನೇ ವರ್ಷದ ಗೋದಾನ ಕಾರ್ಯಕ್ರಮ, ಆಳ್ವಾಸ್‌ ಎಜ್ಯುಕೇಶನ್‌ ಫೌಂಡೇಶನ್‌ ಅಧ್ಯಕ್ಷ ಡಾ. ಎಂ.ಮೋಹನ್ ಅಳ್ವ ಅವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಬೆದರದ ಕಾಮಧೇನು ಎಂಬ ಬಿರುದನ್ನು ನೀಡಿ ಗೌರವಿಸಲಾಗುವುದು ಎಂದು ಉದ್ಯಮಿ, ಧಾರ್ಮಿಕ ಮುಂದಾಳು ಡಾ. ರವೀಂದ್ರ ಶೆಟ್ಟಿ ಬಜಗೋಳಿ ತಿಳಿಸಿದರು.

ಭಾನುವಾರ ಕಾರ್ಕಳದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಗೋಕಳ್ಳರಿಂದಾಗಿ ಗೋವುಗಳನ್ನು ಕಳಕೊಂಡವರಿಗಾಗಿ ದೀಪಾವಳಿ ಸಂದರ್ಭ ಗೋದಾನ ಕಾರ್ಯಕ್ರಮ ಆರಂಭಿಸಲಾಗಿದ್ದು‌ ಇದೀಗ 6ನೇ‌ ವರ್ಷ ಗೋದಾನ ನಡೆಸಲಾಗುತ್ತಿದೆ. ವಿಶೇಷವೆಂದರೆ ಇತ್ತೀಚೆಗೆ ಗೋ ಕಳ್ಳತನಕ್ಕೆ ಕಡಿವಾಣ ಬಿದ್ದಿದೆ. ಆದರೆ ಗೋವನ್ನು ಸಾಕಿ ಜೀವನ ನಿರ್ವಹಣೆ ಮಾಡಲು ಸಿದ್ಧರಿರುವ ಕುಟುಂಬಗಳಿಗೆ ಮಾತ್ರ ಗೋದಾನ ಮಾಡಲಾಗುತ್ತದೆ ಎಂದರು.

ಅಂದು ಸಂಜೆ 5.30ರಿಂದ ಗೋಪೂಜೆ, 6ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಂತರ ಆಳ್ವಾಸ್ ಸಾಂಸ್ಕೃತಿಕ ತಂಡದ ನರಶಾರ್ದೂಲ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಶಾಸಕ ವಿ. ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಅಳದಂಗಡಿ ಅರಮನೆಯ ತಿಮ್ಮಣ್ಣ ಅರಸು ಡಾ. ಪದ್ಮಪ್ರಸಾದ್ ಅಜಿಲ ಅವರು ಸನ್ಮಾನ ಪ್ರದಾನ ಮಾಡಲಿರುವರು. ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದು ಎನ್ ಆರ್ ದಾಮೋದರ ಶರ್ಮಾ ಶುಭಾಶಂಸನೆಗೈಯಲಿರುವರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಧಕಿಯರಾದ ಶ್ರೀನಿಧಿ ಎಸ್. ಶೆಟ್ಟಿ, ಸುಭೀಕ್ಷಾ ನಲ್ಲೂರು, ದಿಶಾ ಪೂಜಾರಿ, ಮೂಡುಬಿದಿರೆ, ಸುಮಲತಾ ಗುರುನಗರ ಬಜಗೋಳಿ ಅವರಿಗೆ ಅಂಬಾಶ್ರೀ ಬಿರುದು ಪ್ರದಾನ ಮಾಡಿ ಗೌರವಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯತೀಶ್ ಶೆಟ್ಟಿ ನಲ್ಲೂರು, ಸಂತೋಷ್ ನಂದಳಿಕೆ, ಶ್ರೇಯಾಂಕ ಆರ್. ಶೆಟ್ಟಿ, ಶಿಕ್ಷಕರಾದ ಸುಬ್ರಹ್ಮಣ್ಯ ಭಟ್, ನಾಗೇಶ್ ನಲ್ಲೂರು ಉಪಸ್ಥಿತರಿದ್ದರು.





























































































































error: Content is protected !!
Scroll to Top