ಸೆ. 20 : ಸಿವಿಲ್‌ ಇಂಜಿನಿಯರ್ಸ್‌ ಅಸೋಸಿಯೇಷನ್‌ ಪದಪ್ರದಾನ

ಕಾರ್ಕಳ : ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ಕಾರ್ಕಳ ಇದರ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಹೊಟೇಲ್ ಪ್ರಕಾಶ್ ಸಭಾಂಗಣದಲ್ಲಿ ಸೆ. 20ರಂದು ಸಂಜೆ 6:30ಕ್ಕೆ ನಡೆಯಲಿದೆ.
ಶಾಸಕ ವಿ. ಸುನಿಲ್‌ ಕುಮಾರ್‌ ಕಾರ್ಯಕ್ರಮ ಉದ್ಘಾಟಿಸುವರು. ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ ಕಾರ್ಕಳದ ಅಧ್ಯಕ್ಷ ರಾಕೇಶ್‌ ಅಮೀನ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಎಸಿಸಿಇ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಕಲ್ಬಾವಿ ಪ್ರಧಾನ ಭಾಷಣ ಮಾಡಲಿದ್ದು, ಅಲ್ಟ್ರಾಟೆಕ್‌ ಸಿಮೆಂಟ್‌ ಲಿ. ಮಂಗಳೂರು ವಿಭಾಗದ ಸೇಲ್ಸ್‌ ಮ್ಯಾನೇಜರ್‌ ಮೋಹನ್‌ ಎಸ್.‌, ಗ್ರೇಟ್‌ ವೈಟ್‌ ಗ್ಲೋಬಲ್‌ ಪ್ರೈವೇಟ್‌ ಲಿ. ಏರಿಯಾ ಸೇಲ್ಸ್‌ ಮ್ಯಾನೇಜರ್‌ ಅರುಣ್ ಕುಮಾರ್ ಜೈನ್, ಎನ್‌ಆರ್‌ಎಎಂಪಿ ಹೆಚ್‌ಒಡಿ ಅರುಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಅಸೋಸಿಯೇಶನ್‌ ಪ್ರಕಟಣೆಯಲ್ಲಿ ತಿಳಿಸಿದೆ.































































error: Content is protected !!
Scroll to Top