ನ. 14: ಸಾಣೂರು ಸೇಣರಬೆಟ್ಟು ಕೊಟಿ-ಚೆನ್ನಯ ಜೋಡುಕೆರೆ ಕಂಬಳ

ಕಾರ್ಕಳ: ಸಾಣೂರು ಸೇಣರಬೆಟ್ಟು ಕೊಟಿ-ಚೆನ್ನಯ ಜೋಡುಕೆರೆ ಕಂಬಳ ಸಮಿತಿಯ ಆಶ್ರಯದಲ್ಲಿ ಹೊನಲು ಬೆಳಕಿನ ಕಂಬಳ ನ.14ರಂದು ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಕಂಬಳದ ಸಾಂಪ್ರದಾಯಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಸಂಜೆ 7 ಗಂಟೆಯಿಂದ ಸಭಾ ಕಾರ್ಯಕ್ರಮ ಜರುಗಲಿದೆ ಎಂದು ಉದಯ್ ಎಸ್. ಕೋಟ್ಯಾನ್ ಮಾಹಿತಿ ನೀಡಿದ್ದಾರೆ.

ಬೆಳಗ್ಗೆ ನಡೆಯುವ ಕಂಬಳೋತ್ಸವದ ಕಾರ್ಯಕ್ರಮಕ್ಕೆ ಭಾಸ್ಕರ ಎಸ್. ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದು, ಡಾ. ಜೀವಂಧರ ಬಲ್ಲಾಳ್, ಪ್ರವೀಣ್ ಮಚ್ಚೇಂದ್ರನಾಥ ಸ್ವಾಮೀಜಿ, ಕೆ.ಎ. ಝದ್ ಬಾಹಸನಿ, ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ಧರ್ಮಗುರು ವಂದನೀಯ ಅಲ್ಟನ್ ಡಿ’ಸೋಜಾ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ವೇದಮೂರ್ತಿ ಶ್ರೀರಾಮ್ ಭಟ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.

ಸಂಜೆ ನಡೆಯುವ ಸಭಾ ಕಾರ್ಯಕ್ರಮವನ್ನು ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಉದ್ಘಾಟಿಸಲಿದ್ದು, ಕಂಬಳ ಸಮಿತಿ ಅಧ್ಯಕ್ಷ ಜಗದೀಶ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ.

ಗೌರವ ಉಪಸ್ಥಿತರಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, ಸಚಿವ ಯು.ಟಿ. ಖಾದರ್, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಸಾಗರ್ ರತ್ನ ಹೋಟೆಲ್ ಸಮೂಹದ ಜಯರಾಮ್ ಬನಾನ್ ಹಾಗೂ ಭಾರತ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ ಜೆ. ಸುವರ್ಣ ಭಾಗವಹಿಸಲಿದ್ದಾರೆ.

ಸಾಣೂರು ಕಂಬಳ ಸಮಿತಿಯ ಪಧಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.























































error: Content is protected !!
Scroll to Top