ಕಾರ್ಕಳ: ಕೌಡೂರು ಗ್ರಾಮದ ಹಾಡಿಮನೆ ಸಮೀಪದ ಯುವಕನೊಬ್ಬ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮೃತನನ್ನು ಸುದೇಶ್ ಭಂಡಾರಿ (33) ಎಂದು ಗುರುತಿಸಲಾಗಿದೆ.
ಇವರ ಪತ್ನಿ ಗರ್ಭಿಣಿಯಾಗಿದ್ದು ಕೆಲವೇ ದಿನಗಳಲ್ಲಿ ಮಗುವಿಗೆ ಜನ್ಮ ನೀಡುವ ಸಂಭ್ರಮದಲ್ಲಿದ್ದಾಗಲೇ ಸುದೇಶ್ ನೇಣಿಗೆ ಶರಣಾಗಿದ್ದಾಗಿ ತಿಳಿದು ಬಂದಿದೆ. ಇವರು ಕುಮಟಾದ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಮೃತ ಸುದೇಶ್ ಪತ್ನಿ, ತಾಯಿ, ಸಹೋದರರನ್ನು ಅಗಲಿದ್ದಾರೆ.




























