ಕಾರ್ಕಳ : ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಡಾರು ಗ್ರಾಮದ ಬುನ್ನಾಡಿಯಲ್ಲಿ ಮಾ. 8ರ ರಾತ್ರಿ ಸಂಭವಿಸಿದೆ. ಪ್ರದೀಪ್ (30) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಪ್ರದೀಪ್ ಇಲೆಕ್ಟ್ರಿಷನ್ ಕೆಲಸ ಮಾಡುತ್ತಿದ್ದು ಮದ್ಯವ್ಯಸನಿಯಾಗಿದ್ದರು. ಇವರ ತಾಯಿ ಕಳೆದ ವರ್ಷ ತೀರಿ ಹೋಗಿದ್ದು, ತಮ್ಮ ಪ್ರಶಾಂತ್ ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ತಾಯಿ ಮತ್ತು ತಮ್ಮನ ಸಾವಿನ ಚಿಂತೆ ಹಾಗೂ ಅತಿಯಾದ ಮದ್ಯವ್ಯಸನದಿಂದಾಗಿ ಪ್ರದೀಪ್ ಮಾ.8ರ ರಾತ್ರಿ ಮನೆಯ ಅಡುಗೆ ಕೋಣೆಯಲ್ಲಿ ಮಹಡಿಗೆ ಲುಂಗಿಯಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮುಡಾರು : ನೇಣು ಬಿಗಿದು ಯುವಕ ಆತ್ಮಹತ್ಯೆ






















