ಚೆನ್ನೈ : ತಮಿಳುನಾಡು ವಿಧಾನಸಭೆಯಲ್ಲಿ ಬುಧವಾರ ನಡೆದ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಸಿಎಂ ಜೋಸೆಫ್ ವಿಜಯ್ ನಿರೀಕ್ಷೆಗೂ ಮೀರಿ ಭರ್ಜರಿ ಬಹುಮತ ಸಾಬೀತುಪಡಿಸಿದ್ದಾರೆ. ವಿಜಯ್ ಸರ್ಕಾರಕ್ಕೆ ಕಾಂಗ್ರೆಸ್ನ ಐವರು ಶಾಸಕರು, ವಿಸಿಕೆಯ ಇಬ್ಬರು, ಸಿಪಿಐನ ಇಬ್ಬರು ಶಾಸಕರು, ಸಿಪಿಐ(ಎಂ) ಇಬ್ಬರು, ಐಯುಎಂಎಲ್ ಪಕ್ಷದ ಇಬ್ಬರು ಶಾಸಕರು ಶಾಸಕರು ಸೇರಿದಂತೆ ಒಟ್ಟು 144 ಜನ ಶಾಸಕರ ಬೆಂಬಲ ದೊರೆತಿದೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ಸರ್ಕಾರಕ್ಕೆ 118 ಶಾಸಕರ ಬೆಂಬಲವಿತ್ತು. ಆದರೆ, ಬಹುಮತ ಸಾಬೀತು ಪಡಿಸುವ ವೇಳೆ ಡಿಎಂಕೆ ಮತ್ತು ಪಿಎಂಕೆ ಶಾಸಕರು ಸಭಾತ್ಯಾಗ ಮಾಡಿದರು. ಒಬ್ಬ ಬಿಜೆಪಿ ಶಾಸಕರು ಮತದಾನದಿಂದ ದೂರ ಉಳಿದರು. ಸದನದಲ್ಲಿದ್ದ 22 ಎಐಡಿಎಂಕೆ ಶಾಸಕರು ವಿಶ್ವಾಸಮತದ ವಿರುದ್ಧ ಮತ ಹಾಕಿದರು.


























