ಸುಳ್ಯ: ಶಾಸಕಿ ಭಾಗೀರಥಿ ಮುರುಳ್ಯ ಅವರ ಕಾರು ಅಪಘಾತಕ್ಕೀಡಾಗಿದ್ದು, ಶಾಸಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಕರಿಕ್ಕಳಸ – ನಿಂತಿಕಲ್ಲು ನಡುವೆ ಸಂಚರಿಸಿತ್ತಿದ್ದ ಸುಳ್ಯ ವಿಧಾನಸಭಾ ಶಾಸಕಿ ಭಾಗೀರಥಿ ಅವರ ಕಾರು ಅಪಘಾತವಾಗಿದೆ. ಮುಚ್ಚಿಲ ಸಮೀಪ ಶಾಸಕರ ಕಾರಿನ ಮುಂದೆ ಹೋಗುತ್ತಿದ್ದ ಕಾರು ಹಠಾತ್ ಬ್ರೇಕ್ ಹಾಕಿರುವ ಪರಿಣಾಮ ಈ ದುರ್ಘಟನೆ ನಡೆದಿದೆ.
ಎದುರುಗಡೆ ಹೋಗುತ್ತಿದ್ದ ಕಾರು ಶಾಸಕರಿದ್ದ ಇನೋವಾ ಕಾರಿನ ಮುಂಭಾಗಕ್ಕೆ ಗುದ್ದಿದೆ. ಶಾಸಕರ ಕಾರಿನ ಮುಂಭಾಗ ಜಖಂಗೊಂಡಿದೆ.
























