ಚೂರಿ ಇರಿತಕ್ಕೆ ಕಾರಣವಾಯ್ತು ಜಮೀನು ವಿವಾದ
ಕಾರ್ಕಳ: ತಾಲೂಕಿನ ಮುಂಡ್ಲಿ – ಶಿರ್ಲಾಲು ಎಂಬಲ್ಲಿ ಉರಗತಜ್ಞ ಅನಿಲ್ ಪ್ರಭು ಎಂಬುವರಿಗೆ ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುಜಿತ್ ಶಿರ್ಲಾಲು ಎಂಬವರು ಚೂರಿ ಇರಿದ ಘಟನೆ ನಡೆದಿದೆ.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಅ. 5ರಂದು ಸಂಜೆ 4 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅನಿಲ್ ಪ್ರಭು ರವರನ್ನು ಕಾರ್ಕಳದ ಸಿಟಿ ಹಾಸ್ಪಿಟಲ್ ಗೆ ದಾಖಲಿಸಲಾಗಿದೆ.

ಆರೋಪಿ ಸುಜಿತ್ ಶೆಟ್ಟಿ

ಅಜೆಕಾರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















