ಸೌಜನ್ಯ ಕೇಸ್: ಪೋಸ್ಟ್‌ಮಾರ್ಟಂ ಮಾಡಿದವರಿಗೆ, ಪೊಲೀಸ್ ಸಿಬ್ಬಂದಿಗೆ ಎಸ್‌ಐಟಿ ನೊಟೀಸ್

ಧರ್ಮಸ್ಥಳ: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಸ್‌ಐ‌ಟಿಯು ಧರ್ಮಸ್ಥಳದ ಸೌಜನ್ಯ ಹತ್ಯೆ ಪ್ರಕರಣದ ಮರುತನಿಖೆ ನಡೆಸುತ್ತಿದ್ದು, ಸೌಜನ್ಯ ಮೃತದೇಹವನ್ನು ಪೋಸ್ಟ್‌ಮಾರ್ಟಂ ಮಾಡಿದ ಸಿಬ್ಬಂದಿಗೆ ನೊಟೀಸ್ ‌ನೀಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಮೊದಲಿನಿಂದ ತನಿಖೆ ಕೊನೆಗೊಳ್ಳುವ ವರೆಗೂ ಇದ್ದ ಪೊಲೀಸ್ ಸಿಬ್ಬಂದಿಗೂ ವಿಚಾರಣೆಗೆ ಹಾಜರಾಗಲು ತನಿಖಾ ಸಂಸ್ಥೆ ನೊಟೀಸ್ ನೀಡಿದೆ.

ಆರಂಭದಲ್ಲಿ ಸಾಕ್ಷಿ ನಾಶ ಮಾಡಿದ ಬಗ್ಗೆ ಇವರ ಮೇಲೆ ಆರೋಪ ಕೇಳಿಬಂದಿದ್ದ ಹಿನ್ನಲೆಯಲ್ಲಿ ಎಸ್‌ಐಟಿ ವಿಚಾರಣೆಗೆ ಮುಂದಾಗಿದೆ. ಶುಕ್ರವಾರ (ಅ.30) ವಿಚಾರಣೆಗೆ ಸೂಚಿಸಲಾಗಿದೆ. ಹಾಜರಾಗುವಂತೆ ನೊಟೀಸ್‌ನಲ್ಲಿ 2012ರಲ್ಲಿ ಪ್ರಕರಣದ ತನಿಖೆ ನಡೆಸಿದ ಪೊಲೀಸ್‌ ಅಧಿಕಾರಿ ಯೋಗೇಶ್ ಗೌಡ ಅವರಿಗೂ ನೋಟಿಸ್ ನೀಡಲಾಗಿತ್ತು. ತನಿಖೆಯ ಪ್ರಾಥಮಿಕ ಹಂತದಲ್ಲಿ ಪೊಲೀಸ್ ಅಧಿಕಾರಿ ಯೋಗೇಶ್ ಸಾಕ್ಷ್ಯನಾಶ ಮಾಡಿದ್ದರು ಎಂದು ಆರೋಪಿಸಲಾಗಿತ್ತು ಎಂದು ತಿಳಿದುಬಂದಿದೆ.





























































































































error: Content is protected !!
Scroll to Top