60 ಸಾವಿರ ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಆಫರ್ ನೀಡಿದ ಸಂಸ್ಥೆ

ನ್ಯೂಯಾರ್ಕ್: ಮೈಕ್ರೋಸಾಫ್ಟ್‌ನಲ್ಲಿ ಜಾಬ್ ಮಾಡುತ್ತಿರುವ ಉದ್ಯೋಗಿಗಳಿಗೆ ಸಂಸ್ಥೆ ಶಾಕ್ ನೀಡಿದೆ. ಸುಮಾರು ಅರವತ್ತು ಸಾವಿರ ಉದ್ಯೋಗಿಗಳನ್ನು ಸ್ವಯಂ ನಿವೃತ್ತಿ ಪಡೆದು ಮನೆಗೆ ತೆರಳುವಂತೆ ಸಂಸ್ಥೆ ತಿಳಿಸಿದೆ ಎಂದು ವರದಿಯಾಗಿದೆ.

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಕ್ಷೇತ್ರದಲ್ಲಿ ತನ್ನ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸುತ್ತಿರುವ ಜಾಗತಿಕ ಟೆಕ್ ದೈತ್ಯ ಮೈಕ್ರೋಸಾಫ್ಟ್, ವೆಚ್ಚ ಕಡಿತದ ಭಾಗವಾಗಿ ಸುಮಾರು 60,000 ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನ (Buyout) ಆಫರ್ ನೀಡಿದೆ. ಸಂಸ್ಥೆಯ ಈ ನಿರ್ಧಾರದಿಂದ ಜಾಗತಿಕ ಮಟ್ಟದ ಕಾಲು ಭಾಗದಷ್ಟು ಸಿಬ್ಬಂದಿ ಮೇಲೆ ಪರಿಣಾಮ ಬೀರಲಿದೆ. ಭಾರತೀಯ ಮೈಕ್ರೋಸಾಫ್ಟ್ ಉದ್ಯೋಗಿಗಳಿಗೂ ಜಾಬ್ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಡೇಟಾ ಸೆಂಟರ್, ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ. ಈ ನಿರ್ಧಾರದ ಬಗ್ಗೆ ಸಿಬ್ಬಂದಿಗೆ ಇಮೇಲ್ ಕಳುಹಿಸಿರುವ ಎಕ್ಸಿಕ್ಯೂಟಿವ್‌ ವೈಸ್‌ ಪ್ರೆಸಿಡೆಂಟ್ ಹಾಗೂ ಚೀಫ್ ಪೀಪಲ್ ಆಫೀಸ‌ರ್ ಆಮಿ ಕೋಲ್‌ಮನ್, ಮೈಕ್ರೋಸಾಫ್ಟ್ ತನ್ನ ಕೆಲಸದ ಶೈಲಿಯನ್ನು ಬದಲಾಯಿಸಿಕೊಳ್ಳುತ್ತಿದ್ದು, ಉದ್ಯೋಗಿಗಳಿಗೆ ತಮ್ಮ ಮುಂದಿನ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು ಈ ಆಫ‌ರ್ ನೆರವಾಗಲಿದೆ ಎಂದು ತಿಳಿಸಿದ್ದಾರೆ‌.

ಮೈಕ್ರೋಸಾಫ್ಟ್ ಪ್ರಸಕ್ತ ವರ್ಷದಲ್ಲಿ ಇಂತಹ ಆಫರ್ ನೀಡುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ಏಪ್ರಿಲ್ ತಿಂಗಳಲ್ಲಿ ಅಮೆರಿಕದ ತನ್ನ ಶೇಕಡಾ 7 ರಷ್ಟು ಸಿಬ್ಬಂದಿಗೆ ಮುಂಚಿತವಾಗಿಯೇ ನಿವೃತ್ತಿ ಹೊಂದುವ ಅವಕಾಶ ನೀಡಲಾಗಿತ್ತು. ಆ ವೇಳೆ ಆಫರ್‌ಗೆ ಅರ್ಹರಾಗಿದ್ದ ಸುಮಾರು ಶೇಕಡಾ 30 ರಷ್ಟು ಉದ್ಯೋಗಿಗಳು ಸ್ವಯಂಪ್ರೇರಿತವಾಗಿ ಸಂಸ್ಥೆಯಿಂದ ಹೊರನಡೆದಿದ್ದರು.

ಜೂನ್ ಕೊನೆಯ ವೇಳೆಗೆ ಮೈಕ್ರೋಸಾಫ್ಟ್‌ನಲ್ಲಿ ಒಟ್ಟು 2,23,000 ಉದ್ಯೋಗಿಗಳಿದ್ದು, 2025 ರ ಕೊನೆಗೆ ಹೋಲಿಸಿದರೆ ಸಿಬ್ಬಂದಿ ಸಂಖ್ಯೆ 2,28,000 ರಿಂದ ಕೊಂಚ ಕಡಿಮೆಯಾಗಿತ್ತು. ಇದೀಗ ಸಂಸ್ಥೆಯ ಒಟ್ಟು ಸಿಬ್ಬಂದಿಯಲ್ಲಿ ಶೇಕಡಾ 27 ರಷ್ಟು ಉದ್ಯೋಗಿಗಳು ಹೊಸ ನಿರ್ಗಮನ ಪ್ಯಾಕೇಜ್‌ ಪಡೆಯಲು ಅರ್ಹರಾಗಿದ್ದಾರೆ. ಕಂಪನಿಯು ತನ್ನ ತ್ರೈಮಾಸಿಕ ಆರ್ಥಿಕ ಫಲಿತಾಂಶವನ್ನು ಈ ವಾರದ ಅಂತ್ಯದಲ್ಲಿ ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ.





























































































































error: Content is protected !!
Scroll to Top