ಭಾರತೀಯ ಪ್ಯಾರಾ ಅಥ್ಲೆಟ್ ಆತ್ಮಹತ್ಯೆಗೆ ಶರಣು

ನವದೆಹಲಿ: ಭಾರತದ ಪ್ಯಾರಾ ಅಥ್ಲೆಟ್, ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದ ನೀರಜ್ ಯಾದವ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನವದೆಹಲಿಯ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಅವರ ಆತ್ಮಹತ್ಯೆ ಸಂಗತಿಯನ್ನು ಭಾರತೀಯ ಪ್ಯಾರಾ ಅಥ್ಲೆಟಿಕ್ ತಂಡದ ಕೋಚ್ ಎಸ್. ಸತ್ಯನಾರಾಯಣ ಅವರು ದೃಢಪಡಿಸಿದ್ದಾರೆ. ಈ ಘಟನೆ ದುರದೃಷ್ಟಕರ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

















































































error: Content is protected !!
Scroll to Top