ಬಹುಚರ್ಚಿತ SIR ಇಂದು ಅಂತ್ಯ: ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ ನೋಡಿಕೊಳ್ಳಿ

ಬೆಂಗಳೂರು: ರಾಜ್ಯದಲ್ಲಿ SIR ಪರಿಷ್ಕರಣೆ ಸಂಪೂರ್ಣವಾಗಿದ್ದು, ಇಂದು ಮತದಾರರ ಹೆಸರಿರುವ ಅಂತಿಮ ಪಟ್ಟಿ ಪ್ರಕಟವಾಗಲಿದೆ. ಸುಧೀರ್ಘ 130 ದಿನಗಳ ಕಾಲ SIR ಪ್ರಕ್ರಿಯೆ ನಡೆದಿದ್ದು, ಅ. 27 ರಂದು ಮತದಾರರ ಅಂತಿಮ ಪಟ್ಟಿ ಪ್ರಕಟವಾಗುವುದರ ಮೂಲಕ ಮುಕ್ತಾಯವಾಗಲಿದೆ.

ಕರ್ನಾಟಕ, ಮಹಾರಾಷ್ಟ್ರ, ಮೇಘಾಲಯ, ಜಾರ್ಖಂಡ್ ಹಾಗೂ ದೆಹಲಿಯಲ್ಲಿ 2026ರ ಜೂನ್ 20ರಿಂದ ಭಾರತ ಚುನಾವಣಾ ಆಯೋಗ ಎಸ್‌ಐಆ‌ರ್ ಆರಂಭಿಸಿತ್ತು. ಆರಂಭದ ವೇಳಾಪಟ್ಟಿಯಂತೆ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಬೇಕಿತ್ತು. ಆದರೆ, ಬಿಎಲ್‌ಒಗಳ ಮನೆ-ಮನೆ ಭೇಟಿ ಅವಧಿಯನ್ನು ಒಂದು ಬಾರಿ ವಿಸ್ತರಿಸಿದ ಪರಿಣಾಮ ಈಗ ಅ.27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತಿದೆ.

ಎಸ್‌ಐಆ‌ರ್ ಪ್ರಕ್ರಿಯೆ ಘೋಷಣೆ ಆಗುವ ಮೊದಲಿಂದ ಹಿಡಿದು ಪ್ರಕ್ರಿಯೆ ಆರಂಭವಾದ ದಿನದಿಂದ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಸೇರಿ ಹಲವಾರು ನಾಗರಿಕ ಸಂಘಟನೆಗಳು ರಾಜ್ಯದಲ್ಲಿ ಎಸ್‌ಐಆರ್‌ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದವು. ಚುನಾವಣಾ ಆಯೋಗದ ವಿರುದ್ಧ ಹತ್ತಾರು ಗಂಭೀರ ಆರೋಪಗಳನ್ನು ಮಾಡಲಾಗಿತ್ತು. ಫಾರಂ-7 ಅಕ್ರಮ ಭರ್ತಿ ವಿಚಾರ ಸಾಕಷ್ಟು ವಿವಾದವನ್ನು ಎಬ್ಬಿಸಿತ್ತು. ಇದರ ವಿಷಯದಲ್ಲಿ ಕಾಂಗ್ರೆಸ್‌-ಎನ್ ಡಿ ಎ ನಡುವೆ ದೊಡ್ಡ ಪ್ರಮಾಣದಲ್ಲಿ ಆರೋಪ-ಪ್ರತ್ಯಾರೋಪಗಳ ಸರಣಿ ನಡೆದಿತ್ತು. ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ವಿವಿಧ ಕಡೆ ಭಾರಿ ಪ್ರತಿಭಟನೆಗಳು ಸಹ ನಡೆದಿದ್ದವು. ಪ್ರತಿ ಹಂತದಲ್ಲಿ ಚುನಾವಣಾ ಆಯೋಗ ‘ಪಾರದದರ್ಶಕ’ತೆಯ ವಾದವನ್ನೇ ಮುಂದಿಡುತ್ತಲೇ ಬಂದಿತ್ತು. ಇದೀಗ ಇವುಗಳಿಗೆಲ್ಲ ಅ.27ರಂದು ಉತ್ತರ ದೊರಕಲಿದೆ.

















































































error: Content is protected !!
Scroll to Top