ಡಿ.4ರಿಂದ 26ರವರೆಗೆ ಮಂಗಳೂರು-ಕೊಲ್ಲಂ ನಡುವೆ ಸಂಚಾರ
ಮಂಗಳೂರು: ಶಬರಿಮಲೆ ಯಾತ್ರೆ ಹಾಗೂ ಕ್ರಿಸ್ಮಸ್ ಹಬ್ಬದ ಸಂದರ್ಭದ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸುವ ಸಲುವಾಗಿ ನೈಋತ್ಯ ರೈಲ್ವೆ ಮಂಗಳೂರು ಸೆಂಟ್ರಲ್ ಮತ್ತು ಕೊಲ್ಲಂ ನಡುವೆ ವಿಶೇಷ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಡಿಸೆಂಬರ್ 4ರಿಂದ 26ರವರೆಗೆ ಎರಡೂ ದಿಕ್ಕುಗಳಲ್ಲಿ ವಿಶೇಷ ರೈಲುಗಳು ಸಂಚರಿಸಲಿವೆ.
ರೈಲು ಸಂಖ್ಯೆ 06231 (ಮಂಗಳೂರು ಸೆಂಟ್ರಲ್–ಕೊಲ್ಲಂ) ಡಿಸೆಂಬರ್ 4ರಿಂದ 25ರವರೆಗೆ ಪ್ರತಿ ಶುಕ್ರವಾರ ಸಂಚರಿಸಲಿದೆ. ಈ ರೈಲು ಮಂಗಳೂರು ಸೆಂಟ್ರಲ್ನಿಂದ ಸಂಜೆ 5.55ಕ್ಕೆ ಹೊರಟು ಮರುದಿನ ಬೆಳಗ್ಗೆ 7.15ಕ್ಕೆ ಕೊಲ್ಲಂ ತಲುಪಲಿದೆ. ರೈಲು ಸಂಖ್ಯೆ 06232 (ಕೊಲ್ಲಂ–ಮಂಗಳೂರು ಸೆಂಟ್ರಲ್) ಡಿಸೆಂಬರ್ 5ರಿಂದ 26ರವರೆಗೆ ಪ್ರತಿ ಶನಿವಾರ ಸಂಚರಿಸಲಿದೆ. ಈ ರೈಲು ಕೊಲ್ಲಂನಿಂದ ಬೆಳಗ್ಗೆ 9.15ಕ್ಕೆ ಹೊರಟು ಅದೇ ದಿನ ರಾತ್ರಿ 9.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.

ಈ ರೈಲಿಗೆ ಕಾಸರಗೋಡು, ಕಾಞಂಗಾಡ್, ಪಯ್ಯನ್ನೂರು, ಕಣ್ಣೂರು, ತಲಶ್ಶೇರಿ, ವಡಕರ, ಕೋಯಿಕ್ಕೋಡ್, ತಿರೂರು, ಶೋರನೂರು, ತ್ರಿಶ್ಶೂರು, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಶ್ಶೇರಿ, ತಿರುವಲ್ಲಾ, ಚೆಂಗನ್ನೂರು, ಮಾವೇಲಿಕ್ಕರ, ಕಾಯಂಕುಳಂ, ಕರುನಾಗಪ್ಪಳ್ಳಿ ಮತ್ತು ಶಾಸ್ತಾಂಕೋಟ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇದೆ. ಈ ವಿಶೇಷ ರೈಲುಗಳು ಒಟ್ಟು 18 ಬೋಗಿಗಳನ್ನು ಹೊಂದಿರಲಿವೆ. ಪ್ರಯಾಣಿಕರು ರೈಲುಗಳ ವೇಳಾಪಟ್ಟಿ ಹಾಗೂ ಇತರ ಮಾಹಿತಿಗಾಗಿ ಭಾರತೀಯ ರೈಲ್ವೆಯ ಅಧಿಕೃತ ವೆಬ್ಸೈಟ್ www.enquiry.indianrail.gov.in, NTES ಮೊಬೈಲ್ ಆ್ಯಪ್ ಅಥವಾ ರೈಲ್ವೆ ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಬಹುದು ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.































































