ನವದೆಹಲಿ: ಪ್ಯಾಕೇಜ್ ಕುಡಿಯುವ ನೀರಿನ ಬ್ರಾಂಡ್‌ಗಳಲ್ಲಿ ಒಂದಾದ ಬಿಸ್ಲಿರಿ ಇಂಟರ್‌ನ್ಯಾಷನಲ್ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಮತ್ತೊಂದು ಕಾನೂನು ಕ್ರಮಕ್ಕೆ ಅನುಮೋದನೆ ನೀಡಿದೆ.
ಪಶ್ಚಿಮ ಬಂಗಾಳದ ಉತ್ಪಾದನಾ ಘಟಕದಿಂದ ಸಂಗ್ರಹಿಸಿದ ನೀರಿನ ಮಾದರಿಯಲ್ಲಿ ಕೊಲಿಫಾರ್ಮ್ ಬ್ಯಾಕ್ಟಿರಿಯಾ ಪತ್ತೆಯಾಗಿರುವುದು ಇದಕ್ಕೆ ಕಾರಣವಾಗಿದೆ. ಒಂದು ವಾರದೊಳಗೆ ಕಂಪನಿಯ ವಿರುದ್ಧ ಎರಡು ಪ್ರಕರಣ ದಾಖಲಾಗಿದೆ.
ಪಶ್ಚಿಮ ಬಂಗಾಳದ ಜಲ್ಪಾಯ್‌ಗುರಿ ಜಿಲ್ಲೆಯ ಟೆಲಿಪಾರಾ ಗ್ರಾಮದ ಬಿಸ್ಸೇರಿ ಘಟಕದಿಂದ ನೀರಿನ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಪ್ರಯೋಗಾಲಯದ ಪರೀಕ್ಷೆಯಲ್ಲಿ ಕೊಲಿಫಾರ್ಮ್ ಬ್ಯಾಕ್ಟಿರಿಯಾ ಇರುವುದು ದೃಢಪಟ್ಟಿದೆ. ಪ್ರಾಥಮಿಕ ಪ್ರಯೋಗಾಲಯದ ವರದಿಯನ್ನಷ್ಟೇ ಅಲ್ಲದೆ, ಮೇಲ್ಮನವಿ ಬಳಿಕ ಪರಿಶೀಲನೆ ನಡೆಸಿದ ಉಲ್ಲೇಖ ಪ್ರಯೋಗಾಲಯವೂ ಇದೇ ಅಂಶವನ್ನು ದೃಢಪಡಿಸಿದೆ ಎಂದು ವರದಿಯಾಗಿದೆ.

ನೀರಿನಲ್ಲಿ ಕೊಲಿಫಾರ್ಮ್ ಬ್ಯಾಕ್ಟಿರಿಯಾ ಕಂಡುಬರುವುದು ಸಂಭಾವ್ಯ ಮಾಲಿನ್ಯದ ಸೂಚಕವಾಗಿದೆ. ಒಳಚರಂಡಿ ಸೋರಿಕೆ, ಹಾನಿಗೊಳಗಾದ ಪೈಪ್‌ಲೈನ್‌ಗಳು ಅಥವಾ ಸ್ವಚ್ಛತೆಯ ಕೊರತೆಯಿಂದ ನೀರು ಕಲುಷಿತಗೊಳ್ಳುವ ಸಾಧ್ಯತೆಯನ್ನು ಇದು ಸೂಚಿಸಬಹುದು. ಪಿಬಿ 201 ಬ್ಯಾಚ್‌ಗೆ ಸೇರಿದ ಈ ನೀರಿನ ಮಾರಾಟವನ್ನು ಆಗಸ್ಟ್ 12, 2026ರಂದು ಎಫ್‌ಎಸ್‌ಎಸ್‌ಎಐ ನಿಷೇಧಿಸಿತ್ತು. ಇದೀಗ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಕಂಪನಿಯ ವಿರುದ್ಧ ವಿಚಾರಣೆ ನಡೆಸಲು ಪ್ರಾಧಿಕಾರ ಅನುಮತಿ ನೀಡಿದೆ.
ಇದಕ್ಕೂ ಮೊದಲು ಗೋವಾದಲ್ಲಿನ ಬಿಸ್ಲಿರಿ ಘಟಕದಿಂದ ಸಂಗ್ರಹಿಸಿದ ನೀರಿನ ಮಾದರಿಯೂ ಪರೀಕ್ಷೆಯಲ್ಲಿ ಅಸುರಕ್ಷಿತವೆಂದು ಕಂಡುಬಂದಿತ್ತು. ಆರಂಭಿಕ ಪರೀಕ್ಷೆಯಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಬೋಮೇಟ್ ಪತ್ತೆಯಾಗಿತ್ತು. ಕಂಪನಿಯ ಮನವಿಯ ಬಳಿಕ ಉಲ್ಲೇಖ ಪ್ರಯೋಗಾಲಯ ನಡೆಸಿದ ಪರೀಕ್ಷೆಯಲ್ಲಿ ಪಾಲಿನ್ಯೂಕ್ಲಿಯರ್ ಅರೊಮ್ಯಾಟಿಕ್ ಹೈಡೋಕಾರ್ಬನ್‌ಗಳು (ಪಿಎಎಚ್‌ಗಳು) ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಅಲ್ಲಿಯೂ ಕಾನೂನು ಕ್ರಮಕ್ಕೆ ಅನುಮೋದನೆ ನೀಡಲಾಗಿತ್ತು.































































