ಪ್ರತಿಭಾ ಕಾರಂಜಿ: ಕಾರ್ಕಳ ಜ್ಞಾನಸುಧಾದ 11 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಕಾರ್ಕಳ ಇವರ ಸಹಯೋಗದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದುರ್ಗಾ ತೆಳ್ಳಾರಿನಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ 11 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಪ್ರಾಥಮಿಕ ವಿಭಾಗದ ಅಭಿನಯ ಗೀತೆಯಲ್ಲಿ ಅನಘಾ ಎಚ್, ಕವನ ವಾಚನದಲ್ಲಿ ತನುಷ್ ಪಿ. ಆಚಾರ್ಯ, ಆಶುಭಾಷಣದಲ್ಲಿ ಸಾನ್ವಿ ನಾಯಕ್, ಕನ್ನಡ ಪ್ರಬಂಧದಲ್ಲಿ ಸನ್ನಿಧಿ, ಭಕ್ತಿಗೀತೆಯಲ್ಲಿ ಅದಿತಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಚಿತ್ರಕಲೆಯಲ್ಲಿ ಆದ್ಯಾ ಎಚ್. ನಾಯ್ಕ್ ದ್ವಿತೀಯ ಸ್ಥಾನ ಹಾಗೂ ಇಂಗ್ಲಿಷ್ ಕಂಠಪಾಠದಲ್ಲಿ ಪ್ರದ್ಯುಮ್ನ ಪ್ರಭು ತೃತೀಯ ಸ್ಥಾನ ಪಡೆದಿರುತ್ತಾರೆ.

ಪ್ರೌಢಶಾಲಾ ವಿಭಾಗದ ಭರತನಾಟ್ಯದಲ್ಲಿ ಅವನಿ ವಿನಾಯಕ್ ಕುಡ್ವ, ಜನಪದ ಗೀತೆಯಲ್ಲಿ ವಿ ತನುಜ್ಞಾ, ಭಾವಗೀತೆಯಲ್ಲಿ ಆರಾಧ್ಯ ಆರ್.ಪಿ., ಧಾರ್ಮಿಕ ಪಠಣದಲ್ಲಿ ಧೀಮಹಿ ಎಂ. ಉಪಾಧ್ಯ, ಪ್ರಬಂಧದಲ್ಲಿ ಸಾನ್ವಿ ಎಸ್, ಹಿಂದಿ ಭಾಷಣದಲ್ಲಿ ಫಿಯೋನಾ ರಿಯಾ ಪಿಂಟೋ, ಆಶುಭಾಷಣದಲ್ಲಿ ಸಾತ್ವಿ ಕುಂದರ್ ಪ್ರಥಮ ಸ್ಥಾನ ಪಡೆದಿರುತ್ತಾರೆ. ನಿಷ್ಕಾ ಎಚ್. ಶೆಟ್ಟಿ ಕವನ ವಾಚನದಲ್ಲಿ ದ್ವಿತೀಯ ಸ್ಥಾನ ಸದ್ಧರ್ಮ ಎಸ್. ಇಂಗ್ಲಿಷ್ ಭಾಷಣದಲ್ಲಿ ದ್ವಿತೀಯ ಸ್ಥಾನ ಹಾಗೂ ಕನ್ನಡ ಭಾಷಣದಲ್ಲಿ ಶುದ್ಧಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.





























































































































error: Content is protected !!
Scroll to Top