ಬಂಟ್ಸ್‌ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ

ಅಧ್ಯಕ್ಷರಾಗಿ ಉದಯ ಶೆಟ್ಟಿ ಮುನಿಯಾಲು – ಉಪಾಧ್ಯಕ್ಷರಾಗಿ ಮಂಜುನಾಥ ಶೆಟ್ಟಿ ಪುನರಾಯ್ಕೆ

ಕಾರ್ಕಳ : ಬಂಟ್ಸ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನಿ. ಕಾರ್ಕಳ ಇದರ ಅಧ್ಯಕ್ಷರಾಗಿ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಹಾಗೂ ಉಪಾಧ್ಯಕ್ಷರಾಗಿ ನಿವೃತ್ತ ಶಿಕ್ಷಕ ಕೆ. ಮಂಜುನಾಥ ಶೆಟ್ಟಿ ಬೈಲೂರು ಪುನರಾಯ್ಕೆಗೊಂಡರು. ಜೋಡುರಸ್ತೆ ಪ್ರೈಮ್‌ ಮಾಲ್‌ ನಲ್ಲಿರುವ ಸೊಸೈಟಿ ಸಭಾಂಗಣದಲ್ಲಿ ಸೋಮವಾರ ನಡೆದ ಮಹಾಸಭೆಯಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು.
ನಿರ್ದೇಶಕರಾಗಿ ಕೆ. ನವೀನ್‌ಚಂದ್ರ ಶೆಟ್ಟಿ, ಪ್ರಶಾಂತ್ ಶೆಟ್ಟಿ, ರಮೇಶ್ ಶೆಟ್ಟಿ, ಸಚೀಂದ್ರ ಶೆಟ್ಟಿ, ಎಂ. ಪ್ರಸನ್ನ ಶೆಟ್ಟಿ, ಎಂ. ಸುಧಾಕರ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ, ಮಾಲಿನಿ ಎನ್. ರೈ, ಸುನಿತಾ ಎಸ್. ಶೆಟ್ಟಿ, ವಿನಯ ಅರುಣ್ ಶೆಟ್ಟಿ, ಬಿ. ನೇಮಿರಾಜ್ ರೈ, ಕೆ. ಶಶಿಧರ ಶೆಟ್ಟಿ ಹಾಗೂ ಶರತ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಚುನಾವಣಾ ರಿಟರ್ನಿಂಗ್ ಅಧಿಕಾರಿ ಕೆ.ಆರ್. ರೋಹಿತ್ ಅವರು ಕಾರ್ಯನಿರ್ವಹಿಸಿರುತ್ತಾರೆ.





























































































































error: Content is protected !!
Scroll to Top