ಸಂತೋಷ್ ಮಾಳ ಅಧ್ಯಕ್ಷ – ಶ್ರೀನಿವಾಸ ಎರ್ಲಪ್ಪಾಡಿ ಕಾರ್ಯದರ್ಶಿ
ಕಾರ್ಕಳ : ಯುವವಾಹಿನಿ ಕಾರ್ಕಳ ಘಟಕದ ನೂತನ ಅಧ್ಯಕ್ಷರಾಗಿ ಸಂತೋಷ್ ಪೂಜಾರಿ ಮಾಳ ಹಾಗೂ ಕಾರ್ಯದರ್ಶಿಯಾಗಿ ಶ್ರೀನಿವಾಸ ಪೂಜಾರಿ ಎರ್ಲಪ್ಪಾಡಿ ಅವರನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ಪೆರ್ವಾಜೆ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ ಘಟಕದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನುಆಯ್ಕೆ ಮಾಡಲಾಗಿದ್ದು, ಸಂತೋಷ್ ಪೂಜಾರಿ ಬಂಗ್ಲೆಗುಡ್ಡೆ ಹಾಗೂ ಸಂದೇಶ್ ಕೋಟ್ಯಾನ್ ಉಪಾಧ್ಯಕ್ಷರಾಗಿ, ಸಂತೋಷ್ ಕೆರ್ವಾಶೆ ಜೊತೆ ಕಾರ್ಯದರ್ಶಿಯಾಗಿ, ರವೀಂದ್ರ ನಕ್ರೆ ಕೋಶಾಧಿಕಾರಿಯಾಗಿ, ಮನೋಜ್ ಕುಮಾರ್ ಮಾಂಜ ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ, ರತ್ನಾಕರ ವರಂಗ ಕ್ರೀಡಾ ನಿರ್ದೇಶಕರಾಗಿ, ಮಂಜುನಾಥ ಕೋಟ್ಯಾನ್ ವಿದ್ಯಾನಿಧಿ ಸಂಚಾಲಕರಾಗಿ, ಪ್ರಶಾಂತ್ ಬಜಗೋಳಿ ಆರೋಗ್ಯ ಸೇವೆ ನಿರ್ದೇಶಕರಾಗಿ, ನಿತಿನ್ ಶಿರ್ಲಾಲು ಸಮಾಜ ಸೇವೆ ನಿರ್ದೇಶಕರಾಗಿ, ನಯನ ಸಾಂಸ್ಕೃತಿಕ ನಿರ್ದೇಶಕರಾಗಿ, ಜಯ ಕಾಂತಾವರ ಕಲೆ ಮತ್ತು ಸಾಹಿತ್ಯ ನಿರ್ದೇಶಕರಾಗಿ, ಪ್ರಕಾಶ್ ಕೋಟ್ಯಾನ್ ಕಾಳಿಕಾಂಬ, ಸಂತೋಷ್ ಬಂಗೇರ ಮಿಯ್ಯಾರು, ಶ್ರುತಿ ರಘುನಾಥ್, ಚಂದ್ರಕಲಾ, ವಿಕಾಸ ಸಾಣೂರು, ಮಧುಕರ್ ಸುವರ್ಣ, ಅಶೋಕ್ ಸುವರ್ಣ, ರಾಕೇಶ್ ಅಮೀನ್, ರಾಕೇಶ್ ತೆಳ್ಳಾರು, ಅಮಿತ್ ಸಾಲ್ಯಾನ್, ಪುನಿತ್ ಸಾಣೂರು, ಸುಷ್ಮಾ ನಕ್ರೆ ಅವರನ್ನು ವಿವಿಧ ವಿಭಾಗಳಿಗೆ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ.
ಸುಧಾಕರ್ ಪೂಜಾರಿ ಕಾರ್ಕಳ, ಗಣೇಶ್ ಸಾಲಿಯಾನ್ ಸಾಣೂರು, ತಾರಾನಾಥ ಕೋಟ್ಯಾನ್ ಸೂರಾಲು, ಅರುಣ್ ಪೂಜಾರಿ ಮಾಂಜ, ಮಮತಾ ಅಂಚನ್ ಅವರು ಗೌರವ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಡಿ. 6 : ಪದಪ್ರದಾನ
ಡಿ. 6ರ ರವಿವಾರ ಆನೆಕೆರೆ ಶ್ರೀ ಕೃಷ್ಣ ಸಮುದಾಯ ಭವನದಲ್ಲಿ ಪದಪ್ರದಾನ ಹಾಗೂ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಶಾಸಕ ವಿ. ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಕಾಶ್ ಪೂಜಾರಿ ಕೆರ್ವಾಶೆ ಅಧ್ಯಕ್ಷತೆ ವಹಿಸಲಿದ್ದು, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ವಿದ್ಯಾರ್ಥಿವೇತನ ವಿತರಣೆ ಮಾಡಲಿರುವರು ಎಂದು ಯುವವಾಹಿನಿ ಘಟಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.































































