ಎಕ್ಸ್ ಖಾತೆ ಹೊಂದಿರುವ ಮಕ್ಕಳ ಮೇಲೆ ನಿಗಾ ಇರಿಸಲು ‘ಪೇರೆಂಟಿಂಗ್ ಫೀಚರ್’ ಪರಿಚಯಿಸಿದ ಎಲಾನ್ ಮಸ್ಕ್

ನವದೆಹಲಿ:ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ 13 ರಿಂದ 17 ವರ್ಷದೊಳಗಿನ ಮಕ್ಕಳ ಸುರಕ್ಷತೆಗಾಗಿ ಹೊಸ ‘ಪೇರೆಂಟಲ್ ಕಂಟ್ರೋಲ್ಸ್’ ಫೀಚ‌ರ್ ಪರಿಚಯಿಸಿದೆ.

ತನ್ನ ಅಧಿಕೃತ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಸ್ಥೆ, ಪೋಷಕರು ತಮ್ಮ ಖಾತೆಯನ್ನು ಮಕ್ಕಳ ಖಾತೆಯೊಂದಿಗೆ ಲಿಂಕ್ ಮಾಡುವ ಮೂಲಕ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಡಲು ಅವಕಾಶ ನೀಡಿದೆ ಎಂದು ‘ಮ್ಯಾಶೇಬಲ್’ ವರದಿ ಮಾಡಿದೆ.

ಈ ಹೊಸ‌ ಫೀಚರ್‌ನಲ್ಲಿ ಮಕ್ಕಳು ದಿನಕ್ಕೆ ಎಷ್ಟು ಹೊತ್ತು ‘ಎಕ್ಸ್’ ಬಳಸಬೇಕು ಎಂಬ ಸಮಯವನ್ನು ಪೋಷಕರೇ ನಿಗದಿ ಮಾಡಬಹುದು. ಸಮಯ ಮುಗಿದ ನಂತರ ಆ್ಯಪ್ ಬಳಕೆಗೆ ಬ್ರೇಕ್ ಬೀಳಲಿದೆ. ಮಕ್ಕಳ ಖಾತೆಯನ್ನು ಹೊಸದಾಗಿ ಯಾರಾದರೂ ಫಾಲೋ ಮಾಡಬೇಕಾದರೆ, ಅದಕ್ಕೆ ಪೋಷಕರ ಅನುಮತಿ ಕಡ್ಡಾಯಗೊಳಿಸುವ ಆಯ್ಕೆ ಇದರಲ್ಲಿದೆ.

ಮಕ್ಕಳ ‘ಫಾರ್ ಯು’ ಫೀಡ್‌ನಲ್ಲಿ ಅವರು ಈಗಾಗಲೇ ಫಾಲೋ ಮಾಡುತ್ತಿರುವ ಖಾತೆಗಳ ಪೋಸ್ಟ್‌ಗಳು ಮಾತ್ರ ಕಾಣಿಸುವಂತೆ ಮಾಡಬಹುದು. ಜೊತೆಗೆ, ಅಸಭ್ಯ ಅಥವಾ ಮಕ್ಕಳಿಗೆ ಬೇಡದ ಪದಗಳನ್ನು ಮ್ಯೂಟ್ ಮಾಡಬಹುದು.

ಮಕ್ಕಳಿಗೆ ಯಾರು ಮೆಸೇಜ್ ಮಾಡಬಹುದು ಎಂಬುದನ್ನು ಪೋಷಕರು ನಿರ್ಧರಿಸಬಹುದು ಹಾಗೂ ಮಕ್ಕಳು ಯಾರೊಂದಿಗೆ ಚಾಟ್ ಮಾಡಿದ್ದಾರೆ ಎಂಬುದನ್ನು ನೋಡಬಹುದು. ಆದರೆ, ಮಕ್ಕಳ ಖಾಸಗಿತನಕ್ಕೆ ಗೌರವ ನೀಡಿ, ಅವರು ಕಳುಹಿಸಿದ ಮೆಸೇಜ್‌ನ ಒಳಗಿನ ವಿವರಗಳನ್ನು ಓದಲು ಪೋಷಕರಿಗೆ ಅವಕಾಶ ಸಂಸ್ಥೆ ನೀಡಿಲ್ಲ.































































































































error: Content is protected !!
Scroll to Top