ಆಶಾ ಕಾರ್ಯಕರ್ತರ ಜೊತೆಗಿನ ಸಿ ಎಂ ಡಿ.ಕೆ.ಶಿವಕುಮಾರ್ ಸಭೆ ಯಶಸ್ವಿ

ಸಭೆಯಲ್ಲಿ ಆಶಾ ಕಾರ್ಯಕರ್ತರಿಗೆ ಸಿ ಎಂ ನೀಡಿದ ಭರವಸೆ ಏನು ಗೊತ್ತಾ?

ಬೆಂಗಳೂರು: ಕಳೆದ 12 ದಿನಗಳಿಂದ ಗೌರವ ಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿದ್ದ ಪ್ರತಿಭಟನೆಗೆ ಗೆಲುವು ಸಿಕ್ಕಿದೆ.

ನ.28 ರಂದು ಸಿಎಂ ಡಿಕೆ ಶಿವಕುಮಾ‌ರ್ ಅವರೊಂದಿಗೆ ಆಶಾ ಕಾರ್ಯಕರ್ತರು ಸಭೆ ನಡೆಸಿದ್ದು, ಈ ಸಭೆ ಯಶಸ್ವಿಗೊಂಡಿದೆ.

ಗೃಹ ಕಚೇರಿಯಲ್ಲಿ ನಡೆದ ಆಶಾ ಕಾರ್ಯಕರ್ತೆಯರೊಂದಿಗಿನ ಸಭೆಯಲ್ಲಿ ಡಿಕೆ ಶಿವಕುಮಾರ್ ಅವರು 2 ಸಾವಿರ ರೂಪಾಯಿ ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ. ಆ ಮೂಲಕ ‘ಆಶಾ’ ಹೋರಾಟಕ್ಕೆ ಗೆಲುವು ಸಿಕ್ಕಂತಾಗಿದೆ.

ಸಂಧಾನ ಸಭೆ ಯಶಸ್ವಿಗೊಂಡ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಗೌರವಧನ ಹೆಚ್ಚಳಕ್ಕೆ ಆಶಾ ಕಾರ್ಯಕರ್ತೆಯರು ಹೋರಾಟ ಮಾಡಿದರು. ಅವರಿಗೆ 2,000 ರೂ. ಹೆಚ್ಚಳ ಮಾಡಿದ್ದೇವೆ. ಅವರ ಕೆಲಸಕ್ಕೆ ಅನುಗುಣವಾಗಿ ಪ್ರೋತ್ಸಾಹಧನ ಸಿಗಲಿದೆ. ಜನವರಿಗೆ 1ರಿಂದ ಹೆಚ್ಚುವರಿ 2,000 ರೂ. ಸಿಗಲಿದ್ದು, ಇನ್ನುಳಿದ ಹೆಚ್ಚುವರಿ 2,000 ರೂ. ಬಗ್ಗೆ ಮುಂದಿನ ಬಜೆಟ್‌ನಲ್ಲಿ ಘೋಷಿಸುತ್ತೇವೆ ಎಂದು ಸಿಎಂ ಭರವಸೆ ನೀಡಿದ್ದಾರೆ.































































































































error: Content is protected !!
Scroll to Top