ಕಾರ್ಕಳ: ಮಧ್ಯಪ್ರದೇಶದ ಗ್ವಾಲಿಯರ್ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಕರ್ನಾಟಕ ಬಾಲಕಿಯರ ತಂಡವು ಅಮೋಘ ಪ್ರದರ್ಶನ ನೀಡಿದೆ.
ಕರ್ನಾಟಕ ಪರವಾಗಿ ಆಡಿದ ಅವನಿ ಎನ್ ಗೋಗಟೆ ಮತ್ತು ತಂಡ ಬಿಹಾರ, ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನ ತಂಡಗಳನ್ನು ಜಯಿಸಿ ಫೈನಲ್ ಪ್ರವೇಶಿಸಿ, ಅಂತಿಮ ಪಂದ್ಯದಲ್ಲಿ ತಮಿಳುನಾಡು ತಂಡದ ವಿರುದ್ಧ ಆಟವಾಡಿ ದ್ವಿತೀಯ ಸ್ಥಾನ ಗಳಿಸಿದೆ.
ಅವನಿ ಎನ್ ಗೋಗಟೆ ಅವರು ಹೆಬ್ರಿಯ ಅಮೃತಭಾರತಿ ವಿದ್ಯಾಸಂಸ್ಥೆಯಲ್ಲಿ ಪ್ರಥಮ ವರ್ಷದ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವನಿ ಅವರ ಈ ಸಾಧನೆಗೆ ಅಮೃತಭಾರತಿ ಟ್ರಸ್ಟ್ನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಮಸ್ತ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿ









































