ನಿಧನ

ಕೈರಬೆಟ್ಟು ದಡ್ಡುಮನೆ ರಾಜು ಪೂಜಾರಿ ನಿಧನ

ಕಾರ್ಕಳ : ಕಲ್ಯಾ ಗ್ರಾಮದ ಕೈರಬೆಟ್ಟು ದಡ್ಡುಮನೆ ನಿವಾಸಿ ರಾಜು ಪೂಜಾರಿಯವರು (78) ಅಲ್ಪಕಾಲದ ಅಸೌಖ್ಯದಿಂದ ಸೆ.19ರಂದು ನಿಧನರಾದರು. ಪ್ರಗತಿಪರ ಕೃಷಿಕ, ದೈವಭಕ್ತರಾಗಿದ್ದ ರಾಜು ಪೂಜಾರಿ ಸೌಮ್ಯ ಸ್ವಭಾವದಿಂದ ಜನಾನುರಾಗಿಯಾಗಿದ್ದರು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.ರಾಜು ಪೂಜಾರಿಯವರ ಅಗಲಿಕೆಗೆ ಕಲ್ಯಾ ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ನಿಟ್ಟೆ ಪಾರೊಟ್ಟು ಮನೆ ಸುಧಾಕರ್ ಪೂಜಾರಿ ನಿಧನ

ಕಾರ್ಕಳ: ನಿಟ್ಟೆ ಪಾರೊಟ್ಟು ಮನೆ ಸುಧಾಕರ ಪೂಜಾರಿಯವರು (77) ಸೆ. 9ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.ಮೂಲತಃ ನಿಟ್ಟೆ ನಡಿಮನೆಯವರಾದ ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪ್ರಗತಿಪರ ಕೃಷಿಕ ಮತ್ತು ಹೈನುಗಾರರಾಗಿದ್ದರು.

ಮರ್ಣೆ ವ್ಯವಸಾಯ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಭವಾನಿ ಶಂಕರ್ ನಿಧನ

ಕಾರ್ಕಳ : ಮರ್ಣೆ ವ್ಯವಸಾಯ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಭವಾನಿ ಶಂಕರ್(60) ಅವರು ನಿನ್ನೆ ತಡರಾತ್ರಿ ದೀರ್ಘಕಾಲದ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಕಳೆದ ಸುಮಾರು ಒಂದು ವರ್ಷದಿಂದ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.ಅವರು ಮೂರು ಅವಧಿಗೆ ಮರ್ಣೆ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಂಘದ ಅಭ್ಯುದಯಕ್ಕೆ ಅಪಾರವಾಗಿ ಶ್ರಮಿಸಿದ್ದರು. ಇದಕ್ಕೂ ಮೊದಲು ಉಪಾಧ್ಯಕ್ಷರಾಗಿದ್ದರು. ಆರಂಭದಲ್ಲಿ ಕಾಂಗ್ರೆಸ್‌ ಮೂಲಕ ರಾಜಕೀಯ ಪ್ರವೇಶಿಸಿ ಬಳಿಕ ಬಿಜೆಪಿ ಸೇರಿ ಜನಾನುರಾಗಿಯಾಗಿದ್ದರು. ಹೆರ್ಮುಂಡೆ ಮಹಾವಿಷ್ಣುಮೂರ್ತಿ ದೇವಸ್ಥಾ ಸೇವಾ ಸಮಿತಿ ಅಧ್ಯಕ್ಷ ಹುದ್ದೆ ಸೇರಿದಂತೆ …

ಮರ್ಣೆ ವ್ಯವಸಾಯ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಭವಾನಿ ಶಂಕರ್ ನಿಧನ Read More »

ಮಣ್ಣಿನ ಗಣಪತಿಯನ್ನು ಬಾವಿಗೆ ಹಾಕಲು ಹೋದ ಮಗು ನೀರು ಪಾಲು

ಉತ್ತರ ಕನ್ನಡ : ಗಣಪತಿ ಮೂರ್ತಿಯೆಂದು ಮಣ್ಣನ್ನು ಬಾವಿಗೆ ಹಾಕುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕಾರವಾರದ ಹರಿದೇವ ನಗರದಲ್ಲಿ ನಡೆದಿದೆ. ಸ್ತುತಿ (3) ಮೃತಪಟ್ಟ ಮಗು. ಮನೆಯ ಅಂಗಳದಲ್ಲಿಯೇ ಆಟವಾಡುತ್ತಿದ್ದ ಮಗು ಗಣಪತಿ ಮೂರ್ತಿ ಎಂದು ಮಣ್ಣನ್ನ ಬಾವಿಯಲ್ಲಿ ಹಾಕಲು ಮುಂದಾಗಿದ್ದಳು. ಈ ವೇಳೆ ಕಾಲು ಜಾರಿ ಬಾವಿಯ ನೀರಿಗೆ ಬಿದ್ದಿದ್ದಾಳೆ. ಇದನ್ನು ಯಾರು ಗಮನಿಸಿಲಿಲ್ಲ. ಮಗು ಕಾಣೆಯಾಗಿದೆ ಎಂದು ಪೋಷಕರು, ಸ್ಥಳೀಯರೆಲ್ಲ ಸೇರಿ ಮನೆಗಳನ್ನು ಹಾಗೂ ಇಡೀ …

ಮಣ್ಣಿನ ಗಣಪತಿಯನ್ನು ಬಾವಿಗೆ ಹಾಕಲು ಹೋದ ಮಗು ನೀರು ಪಾಲು Read More »

ಕಾರ್ಕಳ : ಕುಸಿದು ಬಿದ್ದು ಮಾಲಾಧಾರಿ ನಿಧನ

ಕಾರ್ಕಳ : ಕುಸಿದು ಬಿದ್ದು ಅಯ್ಯಪ್ಪ ಮಾಲಾಧಾರಿಯೋರ್ವರು ಮೃತಪಟ್ಟ ಘಟನೆ ಕಾರ್ಕಳದಲ್ಲಿ ಆ. 13ರ ರಾತ್ರಿ ನಡೆದಿದೆ. ಹೆರ್ಮುಂಡೆ ನಿವಾಸಿ ಸುಧಾಕರ್‌ ಮಡಿವಾಳ (54) ಎಂಬವರೇ ಮೃತಪಟ್ಟ ದುರ್ದೈವಿ. ಶಿವತಿಕೆರೆ ದೇವಸ್ಥಾನ ಸಮೀಪದ ಕೆರೆಯಲ್ಲಿ ಸ್ನಾನ ಮಾಡಿ ಮೇಲೇರಿದ ಅವರು ಬಳಿಕ ಅಲ್ಲೇ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ರವಾನಿಸುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ. ಮೃತರು ಪತ್ನಿ ಹೆರ್ಮುಂಡೆ ಗ್ರಾಮದ ಗ್ರಾಮ ಸಹಾಯಕಿ ಹೇಮ ಹಾಗೂ ಇಬ್ಬರು ಪುತ್ರರನ್ನು …

ಕಾರ್ಕಳ : ಕುಸಿದು ಬಿದ್ದು ಮಾಲಾಧಾರಿ ನಿಧನ Read More »

ಮಂಗಳೂರು : ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು

ಮಂಗಳೂರು : ಲೋ ಬಿಪಿಯಿಂದ ಹೃದಯಾಘಾತ ಸಂಭವಿಸಿ ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿನಿ ಮೃತಪಟ್ಟ ಧಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನಡೆದಿದೆ. ಸುಮಾ (19) ಮೃತ ವಿದ್ಯಾರ್ಥಿನಿ. ಕೆಲ ದಿನಗಳ ಹಿಂದೆ ಸುಮ ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆದು ಮನೆಯಲ್ಲಿದ್ದರು. ಆ. 9 ರಂದು ಅನಾರೋಗ್ಯದ ಕಾರಣ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಆ. 11 ರಂದು ಮತ್ತೆ ಆರೋಗ್ಯ ಹಾಳಾಗಿದ್ದು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. …

ಮಂಗಳೂರು : ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು Read More »

ಕರ್ಣಾಟಕ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಜಯರಾಂ ಭಟ್ ನಿಧನ

ಕಾರ್ಕಳ : ಕರ್ಣಾಟಕ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಪೊಳಲಿ ಜಯರಾಂ ಭಟ್ (71) ಅವರು ಆ. 9 ರಂದು ನಿಧನ ಹೊಂದಿದರು. ಮಧ್ಯಾಹ್ನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೃದಯಾಘಾತದಿಂದ ಕುಸಿದಿದ್ದರು. ಅವರನ್ನು ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನ ಹೊಂದಿದ್ದಾರೆ. ಅವರು ಮುಂಬಯಿನಲ್ಲಿ ಯುನಿವರ್ಸಲ್ ಸೋಂಪೋ ವಿಮಾ ಕಂಪನಿಯ ಮಂಡಳಿ ಸಭೆಯಲ್ಲಿ ಭಾಗವಹಿಸಿ, ಊರಿಗೆ ಮರಳುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು …

ಕರ್ಣಾಟಕ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಜಯರಾಂ ಭಟ್ ನಿಧನ Read More »

ನಿಟ್ಟೆ – ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮಂಜುನಾಥ ಶೆಟ್ಟಿ ನಿಧನ

ಕಾರ್ಕಳ : ನಿಟ್ಟೆ ಗರಡಿ ಬಳಿ ಆ. 7 ರಂದು ಕಾರು ಬೈಕ್‌ ನಡುವೆ ನಡೆದ ಅಫಘಾತದಲ್ಲಿ ಗಾಯಗೊಂಡಿದ್ದ ನಿಟ್ಟೆ ಗ್ರಾಮದ ಮಂಜುನಾಥ ಶೆಟ್ಟಿ ಅವರು ನಿಧನ ಹೊಂದಿದರು. ಮಂಜುನಾಥ ಶೆಟ್ಟಿಯವರು ಸಂಜೆ ಕೆಲಸ ಮುಗಿಸಿಕೊಂಡು ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದಾಗ ಅವಘಾತ ಸಂಭವಿಸಿದ್ದು, ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಗಾಜ್ರೀಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಕೊನೆಯುಸಿರೆಳೆದರು.ಮಂಜುನಾಥ ಅವರು ನಿಟ್ಟೆ ಪರಪ್ಪಾಡಿ …

ನಿಟ್ಟೆ – ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮಂಜುನಾಥ ಶೆಟ್ಟಿ ನಿಧನ Read More »

ಪಾಕೆಟ್ ಮನಿ ಕೊಡದಕ್ಕೆ ಪೋಷಕರಲ್ಲಿ ಮುನಿಸು ! ಕಾಲೇಜು ಪ್ರವೇಶಿಸಿದ ಮರು ದಿನವೇ ವಿದ್ಯಾರ್ಥಿ ನೇಣಿಗೆ ಶರಣು

ಉಳ್ಳಾಲ : ನಗರದ ಕೆಪಿಟಿಯಲ್ಲಿ ಡಿಪ್ಲೊಮಾ ವ್ಯಾಸಂಗಕ್ಕೆ ಸೇರ್ಪಡೆಗೊಂಡ ಎರಡನೇ ದಿನದಂದೇ ವಿದ್ಯಾರ್ಥಿಯೋರ್ವ ನೇಣಿಗೆ ಶರಣಾದ ಘಟನೆ ಕುತ್ತಾರ್ ಸಮೀಪದ ಸುಭಾಷ್ ನಗರದಲ್ಲಿ ನಡೆದಿದೆ.ಸುಭಾಷ್ ನಗರದ ಕೂಲಿ ಕಾರ್ಮಿಕ ಭಾಸ್ಕರ್ ಪೂಜಾರಿ ಮತ್ತು ದಾಕ್ಷಾಯಿಣಿ ಎಂಬವರ ಪುತ್ರ ಸುಶಾಂತ್ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಬುಧವಾರ ಸುಶಾಂತ್‌ ಕಾಲೇಜಿಗೆ ಹೊರಡುವಾಗ ಪೋಷಕರು 500 ರೂ. ಕೊಟ್ಟಿದ್ದರು. ಗುರುವಾರ ಬೆಳಿಗ್ಗೆ ಮತ್ತೆ ಕಾಲೇಜಿಗೆ ಹೋಗುವಾಗ ಖರ್ಚಿಗೆ ರೂ. 500 ಕೊಡುವಂತೆ ಸುಶಾಂತ್‌ ಕೇಳಿದಾಗ ಪೋಷಕರು ನೀಡಿರಲಿಲ್ಲ. ಇದರಿಂದ ಮುನಿಸಿಕೊಂಡ …

ಪಾಕೆಟ್ ಮನಿ ಕೊಡದಕ್ಕೆ ಪೋಷಕರಲ್ಲಿ ಮುನಿಸು ! ಕಾಲೇಜು ಪ್ರವೇಶಿಸಿದ ಮರು ದಿನವೇ ವಿದ್ಯಾರ್ಥಿ ನೇಣಿಗೆ ಶರಣು Read More »

ಶೌಚಕ್ಕೆಂದು ಹೋದವರು ಕುಸಿದು ಬಿದ್ದು ಸಾವು

ಕಾರ್ಕಳ : ಕುಕ್ಕುಂದೂರು ಗ್ರಾಮದ ಪರಪು ಬಸ್ ಸ್ಟಾಂಡ್ ಹಿಂಬದಿ ಪ್ರಕಾಶ್ ನಾಯಕ್‌ ಎಂಬವರು ನಿರ್ಮಿಸುತ್ತಿರುವ ಮನೆಯ ಕೆಲಸಕ್ಕೆಂದು ಬಂದಿದ್ದ ಮಹಾರಾಷ್ಟ್ರದ ಕಾರ್ಮಿಕ ಅಮರನಾಥ್ ವಾಂಗೇಯ ರಾಮ್ ವಿಶ್ವಕರ್ಮ(57) ಎಂಬವರು ಸೋಮವಾರ ಶೌಚಕ್ಕೆಂದು ಹೋದವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಬೆಳಗ್ಗೆ 7 ಗಂಟೆ ಹೊತ್ತಿಗೆ ಅಸ್ವಸ್ಥರಾಗಿ ಬಿದ್ದಿದ್ದ ಅವರನ್ನು ಕೂಡಲೇ ಕಾರ್ಕಳದ ಡಾ.ಟಿ.ಎಂ.ಎ.ಪೈ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಅನಾರೋಗ್ಯ ಅಥವಾ ಹೃದಯಾಘಾತದಿಂದ ಮೃತ ಪಟ್ಟಿರಬಹುದು ಎಂದು ಭಾವಿಸಲಾಗಿದೆ. ಕಾರ್ಕಳ ನಗರ ಪೊಲೀಸ್‌ …

ಶೌಚಕ್ಕೆಂದು ಹೋದವರು ಕುಸಿದು ಬಿದ್ದು ಸಾವು Read More »

error: Content is protected !!
Scroll to Top