ಕಾರ್ಕಳ : ಸರಳ ಮೋಟಾರ್ಸ್ ಮಾಲಕ, ಕಾರ್ಕಳ ದಾನಶಾಲೆ ನಿವಾಸಿ ಎಂ.ಕೆ. ರತ್ನಾಕರ್ (82) ಎ. 19ರಂದು ನಿಧನ ಹೊಂದಿದರು. ಕಾರ್ಕಳದ ಗ್ರಾಮೀಣ ಪ್ರದೇಶಗಳಿಗೆ ಪ್ರಥಮವಾಗಿ ಬಸ್ ಸೇವೆ ಕಲ್ಪಿಸಿದ ರತ್ನಾಕರ್ ಅವರು ತನ್ನ ಧಾರ್ಮಿಕ, ಸಾಮಾಜಿಕ ಕಾರ್ಯಗಳಿಂದಾಗಿ ಜನಾನುರಾಗಿಯಾಗಿದ್ದರು. ಬಾಹುಬಲಿ ಮಹಾಮಸ್ತಕಾಭಿಷೇಕ ಸಂದರ್ಭವೂ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಮೃತರು ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಸಾರ್ವಜನಿಕರು ಮೃತರ ಅಂತಿಮ ದರ್ಶನ ಪಡೆಯಲು ಕಾರ್ಕಳ ದಾನಶಾಲೆಯ ಮನೆಯಲ್ಲಿ ಬೆಳಿಗ್ಗೆ 10 ಗಂಟೆಯವರೆಗೆ ಅವಕಾಶವಿದ್ದು, ತದನಂತರ ಮರೋಡಿಯಲ್ಲಿ 1 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.





