ಅಮೃತ ಭಾರತಿ – ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿ.ಎ., ಸಿ.ಎಸ್‌. ಒರಿಯಂಟೇಶನ್‌

ಹೆಬ್ರಿ : ಪಾಂಡುರಂಗ ರಮಣ ನಾಯಕ್‌ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಜು.1ರಂದು ಸಿ.ಎ, ಸಿ.ಎಸ್. ಒರಿಯಂಟೇಶನ್‌ ಕಾರ್ಯಕ್ರಮ ನಡೆಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಿ.ಎ. ದಾಮಿನಿ ಮಾತನಾಡಿ, ಪಿಯು ಹಂತದಲ್ಲಿಯೇ ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಆಳವಾದ ಅಧ್ಯಯನ ನಡೆಸಬೇಕು. ಶ್ರೇಷ್ಠ ಸಾಧನೆಗೆ ಶಿಸ್ತು ಮತ್ತು ಸಂಯಮದೊಂದಿಗೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಂವಹನ ಕೌಶಲ್ಯ ಅವಶ್ಯವಾಗಿದೆ. ದೇಶದ ಆರ್ಥಿಕ ಪ್ರಗತಿಯಲ್ಲಿ ಲೆಕ್ಕಪರಿಶೋಧಕರ ಪಾತ್ರ ಮಹತ್ತರವಾದದ್ದು ಎಂದರು. ಯೋಗ ಗುರು ಪ್ರಕಾಶ್‌ಚಂದ್ರ, ಕಾಲೇಜಿನ ಪ್ರಾಶುಂಪಾಲ ಪ್ರಕಾಶ್‌ಜೋಗಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶಾರ್ವರಿ ಸ್ವಾಗತಿಸಿದರು. ದೃತಿ ಮತ್ತು ಸಮೀಕ್ಷ ಕಾರ್ಯಕ್ರಮ ನಿರೂಪಿಸಿ, ರಿಶಾ ವಂದಿಸಿದರು.







error: Content is protected !!
Scroll to Top