ಹಣ ಕೊಡುವಂತೆ ಬೆದರಿಕೆ – ಹಲ್ಲೆ

ಕಾರ್ಕಳ : ಹಣ ಕೊಡುವಂತೆ ಬೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಕುರಿತಾಗಿ ವ್ಯಕ್ತಿಯೋರ್ವರ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ. 29ರಂದು ಈದು ಗ್ರಾಮದ ಸಾಧು ಪೂಜಾರಿ ಅವರ ಮನೆಗೆ ಅವರ ಪರಿಚಯದ ದಿಲೀಪ್ ಪೂಜಾರಿ ಬಂದು ಸಿಟ್‌ಔಟ್‌ನಲ್ಲಿ ನಿಂತು ಸಾಧು ಪೂಜಾರಿಯವರನ್ನು ಹೊರಗೆ ಕರೆದು ‌5000 ರೂ. ಹಣವನ್ನು ಕೊಡಬೇಕು ಎಂದು ಬೆದರಿಸಿದಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಹಣ ಕೊಡದಿದ್ದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಆತನ ಜೊತೆಯಲ್ಲಿ ತಂದಿದ್ದ ಮರದ ಸೊಂಟೆಯಿಂದ ಸಾಧು ಅವರ ಮೇಲೇ ಹಲ್ಲೆ ಮಾಡಿದ್ದಾನೆ. ಈ ವೇಳೆ ಸಾಧು ಅವರು ಬೊಬ್ಬೆ ಹಾಕಿದಾಗ ಮನೆಯವರು ಹಾಗೂ ನೆರೆಮನೆಯವರು ಬಂದಿರುವುದನ್ನು ಕಂಡು ಆಪಾದಿತ ದಿಲೀಪ್‌ ಪೂಜಾರಿ ಅಲ್ಲಿಂದ ತನ್ನ ಬೈಕ್‌ನಲ್ಲಿ ಓಡಿ ಹೋಗಿರುವುದಾಗಿ ಸಾಧು ಪೂಜಾರಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top