ಅಧಿಕಾರಿಗಳ ಗೈರು ಹಾಜರಿ : ಬೈಲೂರು – ಕೌಡೂರು ಗ್ರಾಮಸಭೆ ಮುಂದೂಡಿಕೆ

ಕಾರ್ಕಳ : ಬೈಲೂರು- ಕೌಡೂರು ಗ್ರಾಮ ಪಂಚಾಯತ್‌ನಲ್ಲಿ ಆ. 13ರಂದು ನಡೆಯಬೇಕಿದ್ದ ಗ್ರಾಮ ಸಭೆ ಅಧಿಕಾರಿಗಳ ಗೈರು ಹಾಜರಿಯಿಂದಾಗಿ ಮುಂದೂಡಿಕೆಯಾಗಿದೆ. ಗುರುವಾರ ಬೆಳಿಗ್ಗೆ 10.30ಕ್ಕೆ ಗ್ರಾಮ ಸಭೆಯ ಸಮಯ ನಿಗದಿಪಡಿಸಲಾಗಿತ್ತು ಆದರೆ 11:15 ಸಮಯವಾದರು ಇಲಾಖಾಧಿಕಾರಿಗಳು ಗ್ರಾಮಸಭೆಗೆ ಬಾರದೆ ಇದ್ದ ಕಾರಣ ಸಭೆಯನ್ನು ಮುಂದೂಡಲಾಗಿದೆ.

ಗ್ರಾಮಸಭೆಯ ನೋಡಲ್ ಅಧಿಕಾರಿಯಾಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣ, ಪಂಚಾಯತ್ ಆಡಳಿತಾಧಿಕಾರಿ ಎಸ್. ಆರ್. ಗಿರಿಜಮ್ಮ ಹಾಗೂ ಪಿಡಿಒ ನಾಗರಾಜ್ ಎಂ.ಕೆ. ಹಾಜರಿದ್ದರು. ಆರಂಭದಲ್ಲಿ ಪಿಡಿಓ ಸ್ವಾಗತಿಸಿದರು. ನಂತರದಲ್ಲಿ ಗ್ರಾಮಸ್ಥರು ತಮ್ಮ ಇಲಾಖೆಯ ಬಗ್ಗೆ ಜವಾಬ್ದಾರಿಯನ್ನು ಹೊಂದಿಕೊಂಡು ಅಧಿಕಾರಿಗಳು ವರ್ಷಕ್ಕೆ ಎರಡು ಬಾರಿ ನಡೆಯುವ ಗ್ರಾಮ ಸಭೆಗೆ ಹಾಜರಾಗುವುದು ಅವರ ಕರ್ತವ್ಯ. ಆದರೆ ಇಂದು ವೇದಿಕೆಯಲ್ಲಿ ಕೆಲವೇ ಇಲಾಖಾಧಿಕಾರಿಗಳು ಹಾಜರಿದ್ದಾರೆ ಎಂದು ಗ್ರಾಮ ಸಭೆ ಆರಂಭಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ವಲಯ ಅರಣ್ಯ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆ, ತೊಟಾಗಾರಿಕೆ ಇಲಾಖೆ, ಆಹಾರ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದವರ ಗೈರು ಹಾಜರಿಯನ್ನು ಪ್ರಶ್ನಿಸಿದ ನಂತರ ಗ್ರಾಮ ಆಡಳಿತ ಅಧಿಕಾರಿಗಳು ಗ್ರಾಮಸಭೆ ಮುಂದೂಡಲಾಗಿದೆಂದು ಘೋಷಿಸಿದರು.

ಇಂದು ಗ್ರಾಮಸ್ಥರು ಹಲವಾರು ಇಲಾಖೆಗೆ ಅಭಿವೃದ್ಧಿ ಬಗ್ಗೆ ಗಮನ ಹರಿಸಿರಲು ಮನವಿ ಸಲ್ಲಿಸಲು ಹಾಗೂ ರಸ್ತೆ ರಿಪೇರಿ ಮುಂತಾದ ಗಂಭೀರ ವಿಷಯಗಳ ಬಗ್ಗೆ ಚರ್ಚೆ ವಿದ್ದು ಅಧಿಕಾರಿಗಳು ಗ್ರಾಮಸಭೆಗೆ ನಿರ್ಲಕ್ಷ್ಯ ಗ್ರಾಮಸ್ಥರಿಗೆ ಬೇಸರ ತಂದಿದೆ.
ಅಂತೋನಿ ಮಿರಾಂದಾ, ಗ್ರಾಮಸ್ಥರು







































































error: Content is protected !!
Scroll to Top