ಹೆಬ್ರಿ : ಶಿವಪುರ ಗ್ರಾಮ ಪಂಚಾಯತ್ ಪಂಚಾಯತ್ ಬಿಲ್ ವಸೂಲಿಗಾರ ಮನೆ ತೆರಿಗೆಗೆ ಸಂಬಂಧಿಸಿದ ಲಕ್ಷಾಂತರ ರೂಪಾಯಿಯನ್ನು ದುರ್ಬಳಕೆ ಮಾಡಿ ಅವ್ಯವಹಾರ ಎಸಗಿರುವ ಬಗ್ಗೆ ವರದಿಯಾಗಿದೆ.
ಶಿವಪುರ ಗ್ರಾ.ಪಂ.ನ ಬಿಲ್ ವಸೂಲಿಗಾರ ಮಂಜುನಾಥ(40) ಎಂಬಾತ 2023-24ನೇ ಸಾಲಿನಲ್ಲಿ 1,18,367 ರೂ. ಹಾಗೂ 2024-25ರಲ್ಲಿ 3,36,021 ರೂ. ಮನೆ ತೆರಿಗೆಯಲ್ಲಿ ವಸೂಲಾದ ಒಟ್ಟು 4,54,388 ರೂ. ಪಂಚಾಯತ್ ಬ್ಯಾಂಕ್ ಖಾತೆಗೆ ಜಮಾ ಮಾಡದೆ ತನ್ನ ಸ್ವಂತಕ್ಕೆ ಬಳಸಿಕೊಂಡು ಹಣದ ದುರ್ಬಳಕೆ ಮಾಡಿಕೊಂಡು ಮೋಸ ಮಾಡಿರುವುದಾಗಿ ಶಿವಪುರ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ದಿ ಅಧಿಕಾರಿ ಅಶೋಕ್ ನೀಡಿರುವ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಶಿವಪುರ ಗ್ರಾ.ಪಂ. ಸಿಬ್ಬಂದಿಯಿಂದ 4.54 ಲಕ್ಷ ರೂ. ವಂಚನೆ










































