ಸಾಣೂರು : ಶಾಂಭವಿ ಕಲಾವಿದೆರ್ ತಂಡದ ವಾರ್ಷಿಕ ದಿನಾಚರಣೆ

ಕಾರ್ಕಳ : ಶಾಂಭವಿ ಕಲಾವಿದೆರ್ ಸಾಣೂರು ತಂಡದ ವಾರ್ಷಿಕ ದಿನಾಚರಣೆ‌ಯು ಸೆ. 8ರಂದು ನಂದ್ರೊಟ್ಟು ಶ್ರೀ ಚಾಮುಂಡಿ ನೀಚ ಬೊಬ್ಬರ್ಯ ಸನ್ನಿಧಾನದಲ್ಲಿ ನಡೆಯಿತು. ಉದಯರವಿ ಕಲಾವೃಂದದ ಅಧ್ಯಕ್ಷ ಯುವರಾಜ್ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ಸಾಣೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕರುಣಾಕರ್ ಎಸ್‌. ಕೋಟ್ಯಾನ್, ಹಿರಿಯ ಕಲಾವಿದ ಚಂದ್ರಹಾಸ ಸಾಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳ ಆಯ್ಕೆ

ಇದೇ ಸಂದರ್ಭದಲ್ಲಿ ಶಾಂಭವಿ ಕಲಾವಿದೆರ್ ತಂಡದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಗೌರವ ಅಧ್ಯಕ್ಷರಾಗಿ ಭಾಸ್ಕರ್ ಪೂಜಾರಿ, ಸಂಚಾಲಕರಾಗಿ ಸಂತೋಷ್ ಬಂಗೇರ, ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಸಾಣೂರು, ಉಪಾಧ್ಯಕ್ಷರಾಗಿ ಸಂತೋಷ್ ಕುಲಾಲ್, ಸಂತೋಷ್ ಎಸ್‌.ಡಿ. ಕಾರ್ಯದರ್ಶಿಯಾಗಿ ಪ್ರಮೀತ್ ಸಾಣೂರು, ಜೊತೆ ಕಾರ್ಯದರ್ಶಿಯಾಗಿ ರಾಜ್ ಪೂಜಾರಿ, ದೀಕ್ಷಿತ್ ಕುಮಾರ್, ಕೋಶಾಧಿಕಾರಿಯಾಗಿ ಶರತ್ ದೇವಾಡಿಗ, ಆರ್.ಕೆ. ರಂಜಿತ್ ಸುವರ್ಣ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸುರೇಂದ್ರ ಕುಮಾರ್ ಸಾಣೂರು, ಸಂದೇಶ್ ಮುರತಂಗಡಿ, ಮುಕೇಶ್ ದೇವಾಡಿಗ , ಅರುಣ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಸುಖೇಶ್‌ ಕೋಟ್ಯಾನ್‌ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಮೀತ್‌ ಸಾಣೂರು ವಂದಿಸಿದರು.









































































































error: Content is protected !!
Scroll to Top