ಖೋಟಾ ನೋಟು ಮುದ್ರಣ – ಪೊಲೀಸ್ ದಾಳಿ – 7 ಮಂದಿ ಬಂಧನ

ಉಪ್ಪಿನಂಗಡಿ : ಖೋಟಾ ನೋಟು ತಯಾರಿಸುತ್ತಿದ್ದ ಸ್ಥಳಕ್ಕೆ ಬುಧವಾರ ತಡರಾತ್ರಿ ದಾಳಿ ನಡೆಸಿರುವ ಉಪ್ಪಿನಂಗಡಿ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ರಾಹಿಂ, ಶರೀಪ, ಸಂದೀಪ ಪುಂಡಲಿಕ ಶೋಳಂಬಿ, ಮಹಮ್ಮದ್ ನಬಾಸ್, ಸಲ್ಮಾನ್ ಫಾರೀಸ್, ಸಿರಾಜುದ್ದೀನ್, ಇರ್ಷಾದ್ ಬಂಧಿತರು

ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಉಪ್ಪಿನಂಗಡಿ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ತಂಡದವರು ದಂಧೆ ನಡೆಯುತ್ತಿದ್ದ ಅಡಗುದಾಣದ ಮೇಲೆ ಮಿಂಚಿನ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ನಕಲಿ ನೋಟುಗಳನ್ನು ಸಿದ್ಧಪಡಿಸುತ್ತಿದ್ದ 7 ಮಂದಿ ಆರೋಪಿಗಳನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿದೆ. ಅಷ್ಟೇ ಅಲ್ಲದೆ, ಈ ಅಕ್ರಮ ದಂಧೆಗೆ ಬಾಡಿಗೆ ಕಟ್ಟಡ ಒದಗಿಸಿಕೊಟ್ಟಿದ್ದ ಸ್ಥಳೀಯ ವ್ಯಕ್ತಿಯನ್ನೂ ಸಹ ಪೊಲೀಸರು ವಶಕ್ಕೆ ಪಡೆದು ತನಿಖೆಗೊಳಪಡಿಸಿದ್ದಾರೆ.

ಆರೋಪಿಗಳು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಅಸಲಿ ನೋಟುಗಳನ್ನೇ ಹೋಲುವಂತೆ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದಾಳಿಯ ಸಂದರ್ಭದಲ್ಲಿ ಪೊಲೀಸರು ಭಾರಿ ಪ್ರಮಾಣದ ಖೋಟಾನೋಟುಗಳು ಹಾಗೂ ಅವುಗಳ ಮುದ್ರಣಕ್ಕೆ ಬಳಸುತ್ತಿದ್ದ ಕಚ್ಚಾ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

-ಜಪ್ತಿ ಮಾಡಲಾದ ಪ್ರಮುಖ ವಸ್ತುಗಳ ವಿವರ ಹೀಗಿದೆ
ಬೃಹತ್ ಪ್ರಮಾಣದ 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳ ಬಂಡಲ್‌ಗಳು.
ಖೋಟಾನೋಟು ಮುದ್ರಣಕ್ಕೆ ಬಳಸುತ್ತಿದ್ದ ಹೈಟೆಕ್ ಪ್ರಿಂಟಿಂಗ್ ಮೆಷಿನ್‌ಗಳು ಮತ್ತು ಕಂಪ್ಯೂಟರ್ ಮಾನಿಟರ್‌ಗಳು.
ಅಸಲಿ ನೋಟಿನಂತೆ ಬಿಂಬಿಸಲು ಬಳಸುತ್ತಿದ್ದ ಆರ್‌.ಬಿ.ಐ ಸೀಲ್ ಥ್ರೆಡ್
ನೋಟಿನ ಮೇಲೆ ಮುದ್ರಿಸಲು ಬಳಸುತ್ತಿದ್ದ ಮಹಾತ್ಮಾ ಗಾಂಧೀಜಿ ಭಾವಚಿತ್ರವಿರುವ ಸೀಲ್‌ಗಳು.
ಮುದ್ರಣಕ್ಕಾಗಿ ತಂದಿಟ್ಟುಕೊಂಡಿದ್ದ ನೂರಾರು ಎ4 (A4) ಗಾತ್ರದ ಪೇಪರ್ ಶೀಟ್‌ಗಳು.































































error: Content is protected !!
Scroll to Top