ಚಿನ್ನ ಬೆಳ್ಳಿ ಕೆಲಸಗಾರರ ಸಂಘ : ಮಹಾಸಭೆ – ಪದಾಧಿಕಾರಿಗಳ ಆಯ್ಕೆ

ಕಾರ್ಕಳ : ತಾಲೂಕು, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಮಹಾಸಭೆ ಜು. 12ರಂದು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಜರಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೆಸರ ಪಿ. ರವಿ ಆಚಾರ್ಯ ಪೆರ್ವಾಜೆ ಮಾತನಾಡಿ, ಚಿನ್ನ ಬೆಳ್ಳಿ ಕೆಲಸಗಾರರ ಸಂಘವು ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಗಿರುವುದು ಸಂತಸದಾಯಕ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಎಂ. ರಮೇಶ ಆಚಾರ್ಯ ಮಾತನಾಡಿ, ಯಾವುದೇ ಸಂಘ ಸಂಸ್ಥೆಗಳು ಉತ್ತಮ ಕೆಲಸ ಮಾಡಬೇಕಾದರೆ ಸದಸ್ಯರ ಸಲಹೆ ಮಾತ್ರವಲ್ಲದೆ ಸಹಕಾರವೂ ಅವಶ್ಯ ಎಂದ ಅವರು ಸಂಘದ ಕಾರ್ಯಚಟುವಟಿಕೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸನ್ಮಾನ
ಚಿನ್ನಾಭರಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹಾಗೂ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಆಯ್ಕೆಯಾಗಿರುವ ಪಿ. ರವಿ ಆಚಾರ್ಯ ಪೆರ್ವಾಜೆ ಮತ್ತು ಸ್ವರ್ಣಾಭರಣ ತಯಾರಕ ಸುರೇಶ್ ಆಚಾರ್ಯ ಪಿ.ಎಚ್‌. ಹವಾಲ್ದಾರ್ ಬೆಟ್ಟು ಹಾಗೂ ಎಸ್ಸೆಸೆಲ್ಸಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿನಿ ತ್ರಿಷಾ ಆಚಾರ್ಯ ಬೆಳ್ಮಣ್‌ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಎಸ್ಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ ಬುಕ್‌ ವಿತರಿಸಲಾಯಿತು. ಮಹಾಸಭೆಯ ಪ್ರಯುಕ್ತ ಆಯೋಜಿಸಲಾದ ಕ್ರೀಡಾಕೂಟದ ಸ್ಪರ್ಧೆಯ ವಿಜೇತರಿಗೆ ಬಹುಮಾನ, ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ನಗದು ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಕೀಲೆ ಪ್ರೇಮ ವಿ. ಆಚಾರ್ಯ ಅವರು ಕಾನೂನು ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಾಳಿ, ಕಾಳಿಕಾಂಬಾ ದೇವಸ್ಥಾನದ ನಿಕಟ ಪೂರ್ವ ಆಡಳಿತ ಮೊಕ್ತೇಸರ ರಾಮಚಂದ್ರ ಆಚಾರ್ಯ ಅತ್ತೂರು, ದೇವಸ್ಥಾನದ 2ನೇ ಮೊಕ್ತೇಸರ ಸುರೇಶ ಆಚಾರ್ಯ ನಿಟ್ಟೆ ಹಾಗೂ 3ನೇ ಮೊಕ್ತೇಸರ ಪಿ. ವಸಂತ ಆಚಾರ್ಯ ಉಪಸ್ಥಿತರಿದ್ದರು

ಪದಾಧಿಕಾರಿಗಳ ಆಯ್ಕೆ
ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಎಂ. ರಮೇಶ್ ಆಚಾರ್ಯ, ಉಪಾಧ್ಯಕ್ಷರಾಗಿ ವೈ. ಟಿ. ಪ್ರಕಾಶ್ ಆಚಾರ್ಯ, ಕಾರ್ಯದರ್ಶಿಯಾಗಿ ಕೆ. ಸಂತೋಷ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ದಿವಾಕರ ಆಚಾರ್ಯ ನಿಟ್ಟೆ, ಕೋಶಾಧಿಕಾರಿ ಪ್ರಕಾಶ್ ಆಚಾರ್ಯ ಮರತ್ತಂಗಡಿ, ಸಂಘಟನಾ ಕಾರ್ಯದರ್ಶಿಯಾಗಿ ಅಶೋಕ ಆಚಾರ್ಯ ಅಂಡಾರು, ಕ್ರೀಡಾ ಕಾರ್ಯದರ್ಶಿಯಾಗಿ ಅರುಣ್‌ ಆಚಾರ್ಯ ಸಾಲ್ಮರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀನಿವಾಸ ಆಚಾರ್ಯ ರೇಂಜಾಳ, ಕೆ. ಸತೀಶ್ ಆಚಾರ್ಯ, ಗಿರೀಶ್ ಆಚಾರ್ಯ ಬೈಲೂರು, ಮೌನೇಶ್ ಕಾರ್ಕಳ, ವಿಶ್ವನಾಥ್ ಆಚಾರ್ಯ ಕಾರ್ಕಳ, ನಿಖಿಲ್ ಕಾರ್ಕಳ, ಪ್ರವೀಣ್ ಆಚಾರ್ಯ, ಜಯಂತ್ ಪೆರ್ವಾಜೆ, ರಮೇಶ್ ಆಚಾರ್ಯ ಬಂಗ್ಲೆಗುಡ್ಡೆ, ವಿನೋದ್ ಆಚಾರ್ಯ, ಪುರಂದರ್ ಮಾರ್ನಾಡ್, ಸಂತೋಷ್ ಅತ್ತೂರು ಆಯ್ಕೆಯಾಗಿದ್ದಾರೆ.
ಕೆ. ಸಂತೋಷ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಅಶೋಕ್‌ ಆಚಾರ್ಯ ಅಂಡಾರು ವಂದಿಸಿದರು



























error: Content is protected !!
Scroll to Top