ನ್ಯೂಸ್ ಕಾರ್ಕಳ ವರದಿ ಫಲಶ್ರುತಿ – ನಿಮ್ಮೂರಿನ ಸಮಸ್ಯೆ ತಿಳಿಸಿ
ಕಾರ್ಕಳ : ತಾಲೂಕಿನ ವಿವಿಧೆಡೆ ವಿದ್ಯುತ್ ಪರಿವರ್ತಕ ಹಾಗೂ ಕಂಬಗಳಿಗೆ ಸುತ್ತಿರುವ ಬಳ್ಳಿ, ತಾಗಿದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯವನ್ನು ಕಾರ್ಕಳ ಮೆಸ್ಕಾಂ ಇಲಾಖೆ ಮಾಡುತ್ತಿದೆ. ಕುಕ್ಕುಂದೂರು, ಕಾರ್ಕಳ ನಗರ, ತೆಳ್ಳಾರು ರಾಘವೇಂದ್ರ ಮಠ ರಸ್ತೆ, ಕಲ್ಲೊಟ್ಟೆ, ಬೊಬ್ಬಳ ಪರಿಸರ ಸೇರಿದಂತೆ ವಿವಿಧೆಡೆ ವಿದ್ಯುತ್ ಪರಿವರ್ತಕಗಳಿಗೆ ಹಬ್ಬಿಕೊಂಡಿದ್ದ ಬಳ್ಳಿ, ಗೆಲ್ಲುಗಳನ್ನು ಕಟಾವು ಮಾಡಲಾಗಿದೆ.
ವರದಿ ಪ್ರಕಟ
ವಿವಿಧೆಡೆ ಗಿಡಗಂಟಿ, ಬಳ್ಳಿಗಳು ನೆಲದಿಂದ ವಿದ್ಯುತ್ ಪರಿವರ್ತಕ ಹಾಗೂ ಕಂಬದ ಮೇಲಿನ ತಂತಿಗಳವರೆಗೂ ಚಾಚಿಕೊಂಡಿತ್ತು. ಬಳ್ಳಿಗಳು ತಂತಿಗೆ ತಾಗಿಕೊಂಡಾಗ ವಿದ್ಯುತ್ ಪ್ರವಹಿಸಿ ಅನಾಹುತ ಸಂಭವಿಸುವ ಸಾಧ್ಯತೆಯೂ ಇದೆ. ವಿದ್ಯುತ್ ಪರಿವರ್ತಕಗಳಿಗೆ ಬಳ್ಳಿಗಳು ಹಬ್ಬಿದರೆ ಬೆಂಕಿ ಹೊತ್ತಿಕೊಳ್ಳುವ ಅಪಾಯವೂ ಇತ್ತು. ಇದರ ಗಂಭೀರತೆ ಅರಿತು ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ನ್ಯೂಸ್ ಕಾರ್ಕಳದಲ್ಲಿ ಜು. 15ರಂದು ವರದಿ ಪ್ರಕಟಿಸಲಾಗಿತ್ತು. ಇದೀಗ ವರದಿಗೆ ಸ್ಪಂದಿಸಿರುವ ಮೆಸ್ಕಾಂ ಇಲಾಖೆ ಬಳ್ಳಿ, ಗಿಡಗಂಟಿಗಳನ್ನು ಕಟಾವು ಮಾಡುವ ಕಾರ್ಯ ಮಾಡುತ್ತಿದೆ.

ನಿಮ್ಮೂರಿನ ಸಮಸ್ಯೆ ತಿಳಿಸಿ
ಮೆಸ್ಕಾಂ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ನ್ಯೂಸ್ ಕಾರ್ಕಳಕ್ಕೆ ಮಾಹಿತಿ ನೀಡಿ. ಊರಿನ ಹೆಸರಿನೊಂದಿಗೆ ಸಮಸ್ಯೆ ಕುರಿತು ಸ್ಪಷ್ಟವಾಗಿ ಬರೆದು 6363666197 ನಂಬರ್‌ಗೆ ವ್ಯಾಟ್ಸಪ್ ಮಾಡಿ. ನಾವು ಇದನ್ನು ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇವೆ.
























