ಕಾರ್ಕಳದಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆ – ತಂತಿಗೆ ತಾಗಿದ ಬಳ್ಳಿ ಗೆಲ್ಲುಗಳು

ಮಳೆಗಾಲದಲ್ಲೂ ಎಚ್ಚೆತ್ತುಕೊಳ್ಳದ ಮೆಸ್ಕಾಂ ಅಧಿಕಾರಿಗಳು ಕಾರ್ಕಳ : ಕಳೆದ ಕೆಲದಿನಗಳಿಂದ ಕಾರ್ಕಳ, ಕುಕ್ಕುಂದೂರು, ಕಾಬೆಟ್ಟು ಪರಿಸರದಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆಯಾಡುತ್ತಿದೆ. ಇದೀಗ ಬೇಸಿಗೆ ಮಾತ್ರವಲ್ಲದೇ ಮಳೆಗಾಲದಲ್ಲೂ ಕರೆಂಟ್‌ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ತಾಲೂಕಿನ ವಿವಿಧೆಡೆ ವಿದ್ಯುತ್‌ ಪರಿವರ್ತಕ ಹಾಗೂ ಕಂಬಗಳಿಗೆ ಸುತ್ತಿರುವ ಗಿಡಗಂಟಿ, ಬಳ್ಳಿ, ತಾಗಿದ ಗೆಲ್ಲುಗಳನ್ನು ತೆರವುಗೊಳಿಸುವಲ್ಲಿ ಮೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಗುಣಮಟ್ಟದ ವಿದ್ಯುತ್‌ ಪೂರೈಕೆ ಇಲ್ಲದೇ ಮನೆಗಳಿಗೆ ಮಾತ್ರವಲ್ಲದೇ ವಾಣಿಜ್ಯ ಮಳಿಗೆ, ಇಂಡಸ್ಟ್ರೀಗಳಿಗೂ ಸಮಸ್ಯೆಯಾಗಿದೆ. ಗ್ರಾಮೀಣ ಭಾಗದಲ್ಲೂ ಅಸಮರ್ಪಕ, … Continue reading ಕಾರ್ಕಳದಲ್ಲಿ ವಿದ್ಯುತ್‌ ಕಣ್ಣಾಮುಚ್ಚಾಲೆ – ತಂತಿಗೆ ತಾಗಿದ ಬಳ್ಳಿ ಗೆಲ್ಲುಗಳು