ಹೆಬ್ರಿ – ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣ

ಹೆಬ್ರಿ : ಹೆಬ್ರಿ ಪರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿ ಶೇ. 90ರಷ್ಟು ಪೂರ್ಣಗೊಂಡಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ತಿಳಿಸಿದೆ. ಹೆಬ್ರಿ ಪೇಟೆಯಲ್ಲಿ ಕಾಮಗಾರಿಯು ಪೂರ್ಣಗೊಂಡಿದ್ದು, ಬ್ರಹ್ಮಾವರ-ಹೆಬ್ರಿ ಜಂಕ್ಷನ್ ಕಾಮಗಾರಿ ಮಾತ್ರ ಬಾಕಿ ಇರುತ್ತದೆ. ಕಾಮಗಾರಿಯಿಂದಾಗಿ ಹೆಬ್ರಿ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದು. ದೇವಸ್ಥಾನದ ಮುಂದಿರುವ ವಾಣಿಜ್ಯ ಮಳಿಗೆಗಳನ್ನು ಮಾತ್ರ ತೆರವುಗೊಳಿಸಲು ಕೋರಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ (ಎನ್‌ಹೆಚ್‌ಡಿ) ಸ್ಪಷ್ಟಪಡಿಸಿದೆ.
ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಮುಂಭಾಗ ಇರುವ ವಾಣಿಜ್ಯ ಮಳಿಗೆಗಳಿಗೆ ದೇವಸ್ಥಾನದ ಸಮಿತಿಯಿಂದ ಸಂಬಂಧಿಸಿದ ದಾಖಲಾತಿಗಳನ್ನು ಸಲ್ಲಿಸಿದ ಕೂಡಲೇ ಭೂ ಪರಿಹಾರವನ್ನು ಇಲಾಖೆಯಿಂದ ಪಾವತಿಸಲು ಕ್ರಮಕೈಗೊಳ್ಳಲಾಗಿರುತ್ತದೆ. ದೇವಸ್ಥಾನದ ಭೂ ಸ್ವಾಧೀನಕ್ಕೆ ಒಳಪಟ್ಟ 4 ವಾಣಿಜ್ಯ ಮಳಿಗೆಗಳನ್ನು ಹೊರತುಪಡಿಸಿ ದೇವಸ್ಥಾನಕ್ಕಾಗಲಿ, ದೇವಸ್ಥಾನದ ಹೊರಾಂಗಣಕ್ಕಾಗಲಿ, ವೃತ್ತ ನಿರ್ಮಿಸಲು ಮತ್ತು ರಥ ಸಂಚಾರಕ್ಕಾಗಲಿ ಯಾವುದೇ ತೊಂದರೆಯಾಗದು. ರಾಷ್ಟ್ರೀಯ ಹೆದ್ದಾರಿ 169 ಎ ರ 51.600ರಿಂದ 76.200 ಕಿ. ಮೀ. (ಹೆಬ್ರಿ-ಪರ್ಕಳ) ಮತ್ತು 85.200 ರಿಂದ 88.900 ಕಿ.ಮೀ. (ಕರಾವಳಿ ಜಂಕ್ಷನ್-ಮಲ್ಪೆ) ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ ಎಂದು ಇಲಾಖೆ ತಿಳಿಸಿದೆ.



























error: Content is protected !!
Scroll to Top